ಅನುದಿನ ಕವನ-೧೯೫೦, ಹಿರಿಯ ಕವಿ: ಅರುಣಕುಮಾರ ಹಬ್ಬು, ಹುಬ್ಬಳ್ಳಿ, ಕವನದ ಶೀರ್ಷಿಕೆ: ದೇವನೆಲ್ಲರುವನು?

ದೇವನೆಲ್ಲರುವನು?


ದೇವ ಎಲ್ಲಿಹನು
ಗುಡಿಯೊಳಗಿಹನೇ?
ಇದ್ದರೆ ಏಕೆ ಕಾಣಲಾರ
ಗರ್ಭ ಗುಡಿಯ ಬಿಟ್ಟು
ಹೊರಬಂದು ಏಕೆ
ಪ್ರತ್ಯಕ್ಷನಾಗಲಾರ?
ನಾಲ್ಕು ಗೋಡೆಯ ಮಧ್ಯೆ
ಕುಳಿತು ಧ್ಯಾನಿಸುತಿಹನೇ?
ಗುಡಿಗೆ ಹೋಗಿ
ಕಾಣಿಕೆ ಹಾಕಿ ವರವ
ಬೇಡುತ್ತ ಸಾಕಾಗಿದೆ ನನಗೆ. . .

* * * *
ದೇವ ಗುಡಿಯಲಿಲ್ಲ
ಗುಡಿಯಲಿದ್ದುದು
ಅವನ ಮೂರ್ತಿ ಮಾತ್ರ
ನಿನ್ನ ಹೃದಯದಲಿ
ಆ ದಿವ್ಯ ಮೂರ್ತಿ ಸ್ಥಾಪಿಸಲಿ

ಅಂದರೆ ದೇವ
ಇರುವನು ನಿನ್ನಂತರಂಗದಲಿ
ಒಳಗಣ್ಣ ತೆರೆದು ನೋಡು
ಗುಡಿಯಲಿರುವ ದೇವ
ಕಾಣುವನು ಹೃದಯದಲಿ

ಒಳಗಣ್ಣ ಮುಚ್ಚಿದರೆ
ಅದೃಶ್ಯವಾಗುವನು
ತೆರೆದು ನೋಡಿದರೆ
ವರವ ನೀಡುವನು

ಆಗ ಅವ ಹೇಳುವನು
ನಿನ್ನ‌ ಕರ್ಮವ ಮಾಡು
ನಿಷ್ಠೆಯಲಿ ನಿತ್ಯ ಪೂಜೆಯಂತೆ
ದೇವ ಒಲಿವನು ತಾನಾಗಿ

-ಅರುಣಕುಮಾರ ಹಬ್ಬು, ಹುಬ್ಬಳ್ಳಿ

Leave a Reply

Your email address will not be published. Required fields are marked *