ನೀನುನಾನು- ನಾನು ನೀನು
ಗೀಚುವವರು ಗೀಚಬಹುದು ಸಾವಿರಾರು ಸಾಲುಗಳು ಯಾರ್ಯಾರಿಗಾಗಿಯೋ,
ನಾ ಗೀಚುವ ಪ್ರತಿ ಸಾಲು ನಿನಗಾಗಿಯೇ,
ಯಾಕೆ ಗೀಚುತ್ತಿರುವೆನೋ ನನಗೂ ಗೊತ್ತಿಲ್ಲ,
ಗೀಚುವ ಪ್ರತಿ ಸಾಲುಗಳು ಮಾತನಾಡುತ್ತವೆ ನನ್ನ ಜೊತೆ..
ಮನವನರಳಿಸುತ್ತವೆ ಮುಗುಳ್ನಕ್ಕು
ನೋವನು ಶಮನಗೊಳಿಸುತ್ತವೆ
ಕಣ್ಣೀರೊರೆಸುತ್ತವೆ..
ಸುಮ್ಮಸುಮ್ಮನೇ ನಗಿಸುತ್ತವೆ
ಒಂಟಿತನದ ಜೊತೆ ಜಂಟಿಯಾಗಿ ನಿಂತು
ನಾನಿದ್ದೇನೆ ಎನ್ನುತ್ತವೆ
ನೀ ಬಾರದಿದ್ದರೂ ನನ್ನ ಬಳಿ
ಆ ಸಾಲುಗಳು ಬಾಹುಗಳಾಗುತ್ತವೆ
ಮಧುರ ಅಧರಗಳಾಗುತ್ತವೆ
ಬಿಸಿಯಪ್ಪುಯಾಗಿ ಮೈ ಮರೆಯಿಸಿಬಿಡುತ್ತವೆ..
ನೀನ್ಯಾರೋ ನಾನ್ಯಾರೋ ಎಂಬುದ ಮರೆಯಿಸಿ ನಮ್ಮಿಬ್ಬರ
ಒಂದುಗೂಡಿಸುತ್ತವೆ

-ಮಹಿಮ, ಬಳ್ಳಾರಿ
