ಬಳ್ಳಾರಿ, ಸೆ.2: ಕರ್ನಾಟಕ ಜಾನಪದ ಪರಿಷತ್ತು, ಜಿಲ್ಲಾ ಘಟಕ ಹಾಗೂ ನಾಡೋಜ ಬುರ್ರಕಥಾ ಈರಮ್ಮ ಫೌಂಡೇಶನ್ ಸಹಯೋಗದಲ್ಲಿ ಇಂದು (ಸೆ.2) ನಗರದ ಸೋನಿಯಾ ಗಾಂಧಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿಶ್ವ ಜಾನಪದ ದಿನವನ್ನು ಆಚರಿಸಲಾಗುವುದು.

ಬೆ.11 ಗಂಟೆಗೆ ಎಡಿಸಿ ಮಹಮ್ಮದ್ ಜುಬೇರ್ ಎನ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಗೌಸಿಯಾ ಎಜ್ಯುಕೇಷನ್ ಮೈನಾರಿಟೀಸ್ ಸೊಸೈಟಿಯ ಕಾರ್ಯದರ್ಶಿ ತಾಜುದ್ದೀನ್ ಪಿ ಅವರು ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಯಾಗಿ ಸಹಾಯಕ ಆಯುಕ್ತರ ಕಚೇರಿಯ ತಹಸೀಲ್ದಾರ್ ಸೈಯದ್ ಷಾಷಾವಲಿ, ಶ್ರೀ ಕೊಟ್ಟೂರುಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಸತೀಶ್ ಎ ಹಿರೇಮಠ, ಗೌಸಿಯಾ ಎಜ್ಯುಕೇಷನ್ ಮೈನಾರಿಟೀಸ್ ಸೊಸೈಟಿಯ ಅಧ್ಯಕ್ಷೆ ಶ್ರೀಮತಿ ಆಲ್ಮಸ್ ತಬಸಮ್ ಉಪಸ್ಥಿತರಿರುವರು.
ವಿಶೇಷ ಉಪನ್ಯಾಸ: ವಿಶ್ವ ಜಾನಪದ ದಿನಾಚರಣೆಯ ಅಂಗವಾಗಿ ‘ಬಳ್ಳಾರಿ ಜಿಲ್ಲೆಯ ಜಾನಪದ ಪರಂಪರೆ’ ಉಪನ್ಯಾಸ ಏರ್ಪಡಿಸಿದ್ದು, ಪ್ರಸಿದ್ಧ ಜಾನಪದ ಗಾಯಕ, ರಂಗ ಕರ್ಮಿ ಎಸ್ ಎಂ ಹುಲುಗಪ್ಪ ಅವರು ಉಪನ್ಯಾಸ ನೀಡಲಿದ್ದಾರೆ ಎಂದು ಪರಿಷತ್ತು ಜಿಲ್ಲಾಧ್ಯಕ್ಷ, ಹಿರಿಯ ಪತ್ರಕರ್ತ ಸಿ. ಮಂಜುನಾಥ ತಿಳಿಸಿದ್ದಾರೆ.
ಕಾಲೇಜಿನ ಪ್ರಶಿಕ್ಷಣಾರ್ಥಿಗಳಿಂದ ಜನಪದ ಕಲಾ ಸಂಭ್ರಮ ಹಾಗೂ ನಾಡಿನ ವೈವಿಧ್ಯತೆಯ ವೇಷಭೂಷಣಗಳ ಪ್ರದರ್ಶನ ಜರುಗಲಿದೆ ಎಂದು ನಾಡೋಜ ಬುರ್ರಕಥಾ ಈರಮ್ಮ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಡಾ. ಅಶ್ವರಾಮು ಮಾಹಿತಿ ನೀಡಿದ್ದಾರೆ.
*****
