ಹಿರಿಯೂರಿನಲ್ಲಿ ಶಿಕ್ಷಕರ ದಿನಾಚರಣೆ: ದೇಶದ ಅಭಿವೃದ್ಧಿಯ ಮೂಲ ಧಾತು ಶಿಕ್ಷಕರು -ಡಾ. ನೆಲ್ಲಿಕಟ್ಟೆ ಎಸ್ ಸಿದ್ದೇಶ್

ಹಿರಿಯೂರು, ಸೆ.5: ಸಮಾಜ, ನಾಡು, ದೇಶದ ಅಭಿವೃದ್ಧಿಯ ಮೂಲ ಧಾತು ಶಿಕ್ಷಕರು, ಸರ್ವ ಕ್ಷೇತ್ರಗಳ ಪ್ರಗತಿ ಅವಲಂಬಿಸಿರುವುದು ಶಿಕ್ಷಕರನ್ನು ಪ್ರತಿ ಹಳ್ಳಿ ನಗರಗಳ ಸಾರ್ವಜನಿಕರು ರಾಜಕಾರಣಿಗಳು ಸಮುದಾಯಗಳು ಅಧಿಕಾರಿಗಳು ವಿವಿಧ ಇಲಾಖೆಗಳು ಶಿಕ್ಷಕರನ್ನು ಗೌರವಿಸುವ ಮೂಲಕ ಸಮೃದ್ಧ ಮತ್ತು ಸಮ ಸಮಾಜವನ್ನು ಕಟ್ಟಲು ಸಾಧ್ಯವಾಗುವಂತೆ ಶಿಕ್ಷಕರನ್ನು ಅಭಿನಂದಿಸುವ ಶಿಕ್ಷಕ ದಿನಾಚರಣೆಯನ್ನು ಸಾರ್ವಜನಿಕವಾಗಿ ಆಚರಿಸಬೇಕೆಂದು ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಭಾರತೀಯ ನಿರ್ದೇಶಕ ಡಾ. ನೆಲ್ಲಿಕಟ್ಟೆ ಸಿದ್ದೇಶ್ ಅಭಿಪ್ರಾಯ ಪಟ್ಟರು.                  ನಗರದ ಗುರುಭವನದಲ್ಲಿ ಶನಿವಾರ ಏರ್ಪಡಿಸಿದ್ದ  ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು  ವಿಶೇಷ ಉಪನ್ಯಾಸ ನೀಡಿದರು.

    ಶಿಕ್ಷಕರಾಗಿ, ಪ್ರಾದ್ಯಾಪಕರಾಗಿ, ಕುಲಪತಿಗಳಾಗಿ, ರಾಷ್ಟ್ರಪತಿಯಾಗಿ ರಾಯಭಾರಿಯಾಗಿ, ಶಿಕ್ಷಣ ತಜ್ಞರಾಗಿ ಅಪೂರ್ವ ಸೇವೆ ಸಲ್ಲಿಸಿದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರಂತೆ ಶಿಕ್ಷಕರಾದ ನಾವುಗಳು ಸೇವೆ ಸಲ್ಲಿಸಬೇಕೆಂದರು.                                    ಜ್ಞಾನಕ್ಕಿಂತ ಶ್ರೇಷ್ಠವಾದ ಹಾಗೂ ಪ್ರಬಲವಾದ ಶಕ್ತಿ ಮತ್ತೊಂದಿಲ್ಲ ಅಂತಹ ಜ್ಞಾನವನ್ನು ಬೋಧಿಸುವ ಶಿಕ್ಷಕ ಸಮುದಾಯಕ್ಕೆ ನಮ್ಮ ಸರ್ಕಾರಗಳು ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕೆಂದು ಅಭಿಪ್ರಾಯಪಟ್ಟರು.                                        ವಿಧಾನ ಪರಿಷತ್ ಸದಸ್ಯರಾದ ಡಿ ಟಿ ಶ್ರೀನಿವಾಸ್ ಅವರು ಮಾತನಾಡಿ ಶಿಕ್ಷಕರಿಗೆ ಅತಿ ಅಗತ್ಯವಾಗಿರುವಂತಹ ಗುರುಭವನವನ್ನು ಅಭಿವೃದ್ಧಿಪಡಿಸಲು ಅನುದಾನ ನೀಡುವೆ  ಎಂದರು.  ಶಿಕ್ಷಕರೇ ನಮ್ಮ ಸಮಾಜದ ಆಸ್ತಿ ಶಿಕ್ಷಕರು ಕೌಶಲ್ಯ ಆಧಾರಿತ ಬೋಧನೆಯನ್ನು ಮಾಡುವುದರ ಮೂಲಕ ಇಂದಿನ ತಾಂತ್ರಿಕ ಉಪಕರಣಗಳ ಬಳಕೆಯೊಂದಿಗೆ ವಿದ್ಯಾರ್ಥಿ ಗಳಲ್ಲಿ ಕಲಿಕಾ ಶಕ್ತಿಯನ್ನು ಹೆಚ್ಚಿಸಬೇಕು ನೌಕರರಿಗೆ ಹಳೇ ಪಿಂಚಣಿ ವೇತನ ಮರು ಜಾರಿಯಾಗುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗುವುದೆಂದು ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸಿಎಂ ತಿಪ್ಪೇಸ್ವಾಮಿ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಸಾಧನೆಯನ್ನು ಪರಿಚಯಿಸಿ, ತಾಲೂಕಿನ ಶಿಕ್ಷಣ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ವೃತ್ತಿ ಬದ್ಧತೆಯಿಂದ ನಿಷ್ಠೆಯಿಂದ ಕಾರ್ಯನಿರ್ವಹಿಸಬೇಕೆಂದು ತಿಳಿಸಿದರು.          ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಮೇಶ್ ಅವರು ಮಾತನಾಡಿ ಶಿಕ್ಷಕರ ಮತ್ತು ಶಿಕ್ಷಣ ಇಲಾಖೆಯ ಕಾರ್ಯಗಳನ್ನು ಶ್ಲಾಘಿಸಿದರು.                        ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸುನಂದಮ್ಮ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಲೋಹಿತ್ ಮಾತನಾಡಿದರು.                     ಕ್ಷೇತ್ರ ಸಮನ್ವಯಾಧಿಕಾರಿ ಆರ್‌ ಟಿ ಎಸ್ ಶ್ರೀನಿವಾಸ್, ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ವಿ ಭಾಗ್ಯ, ಪ್ರೌಢಶಾಲಾ ಶಿಕ್ಷಕರ ಅಧ್ಯಕ್ಷ ಸಿ ಪ್ರಸನ್ನ ಕುಮಾರ್, ಜೆ ಶಿವಲಿಂಗಪ್ಪ, ಕೃಷ್ಣುದಾ, ಸ್ವಪ್ನ, ತಿಪ್ಪೇಸ್ವಾಮಿ ತಾಲೂಕಿನ ವಿವಿಧ ಸಂಘ ಶಿಕ್ಷಕ ಸಂಘಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.                                                ಇದೇ ಸಂದರ್ಭದಲ್ಲಿ  28 ಉತ್ತಮ ಶಿಕ್ಷಕ ಪ್ರಶಸ್ತಿ 7 ಉತ್ತಮ ಶಾಲಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.      76 ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.  ಶಿವಾನಂದ ಸ್ವಾಗತಿಸಿದರು. ಪುಟ್ಟಸ್ವಾಮಿ ವಂದಿಸಿದರು. ಗಿರೀಶ್ ಮತ್ತು ರಾಧಾ ನಿರೂಪಿಸಿದರು.            ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *