ಶೈಕ್ಷಣಿಕ ಸದೃಢತೆಗೆ ಶಿಸ್ತು ಅವಶ್ಯಕ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರಾದ ಡಾ.ಶಕುಂತಲ.ಎನ್ ಕಿವಿಮಾತು

ಹರಿಹರ: ಗುರು- ಹಿರಿಯರ ಮಾರ್ಗದರ್ಶನದಿಂದ ವಿದ್ಯಾರ್ಥಿಗಳು ಶಿಸ್ತು ಸಂಯಮವನ್ನು ಅಳವಡಿಸಿಕೊಳ್ಳುಬೇಕು. ಶ್ರದ್ಧೆ ಮತ್ತು ಶೈಕ್ಷಣಿಕ ಸದೃಢತೆ ಕಾಪಾಡಿಕೊಂಡಲ್ಲಿ ಶಿಕ್ಷಣವನ್ನು ಶಿಸ್ತುಬದ್ಧವಾಗಿ ಪಡೆಯಲು ಸಾಧ್ಯ ಎಂದು ಸರ್ಕಾರಿ  ದರ್ಜೆ ಕಾಲೇಜು ಪ್ರಾಂಶುಪಾಲರಾದ ಡಾ.ಶಕುಂತಲ.ಎನ್ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜುನಲ್ಲಿ ಇಂದು ಪ್ರಥಮ ವರ್ಷದ ಬಿ.ಎ., ಬಿ.ಕಾಂ., ಬಿ.ಬಿ.ಎ., ಬಿ.ಸಿ.ಎ ಮತ್ತು ಬಿ.ಎಸ್ಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಅಭಿವಿನ್ಯಾಸ (ಪುನಶ್ವೇತನ) ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿ, ವಿದ್ಯಾರ್ಥಿಗಳು ಕಾಲಹರಣ ಮಾಡದೇ, ಶೈಕ್ಷಣಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಹಾಗೂ ವಿದ್ಯಾರ್ಥಿಗಳ ಭವಿಷ್ಯದ ಕನಸುಗಳನ್ನು ನನಸು ಮಾಡಿರ್ಕೊಳ್ಳಲು ಸರ್ಕಾರಿ ಕಾಲೇಜುಗಳಲ್ಲಿ ಇರುವ ಅಧ್ಯಾಪಕರ ಮತ್ತು ಇತರೆ ಸೌಲಭ್ಯಗಳನ್ನು ಬಳಸಿಕೊಂಡು ಭವಿಷ್ಯ ರೂಪಿಸಿಕೊಳ್ಳಲು ತಿಳಿಹೇಳಿದರು.

ಐ.ಕ್ಯೂ.ಎಸ್.ಸಿ ಸಂಯೋಜಕರಾದ ಡಾ.ಯೋಗೀಶ್.ಕೆ.ಎಂ ಅವರು ಈ ಸಮಯದಲ್ಲಿ ಮಾತನಾಡಿ, ಎಲ್ಲ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳ ಪರಿಚಯದೊಂದಿಗೆ, ಕಾಲೇಜಿನಲ್ಲಿನ ಇರುವ ಅನುಕೂಲಗಳು ಮತ್ತು ಸೌಲ್ಯಭ್ಯಗಳ ಬಗೆಗೆ ಮಾಹಿತಿ ವಿನಿಮಯ ಮಾಡಿದರು.

ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಮನೋಹರ.ಬಿ.ಎಂ, ಗ್ರಂಥಪಾಲಕರಾದ ಚಿದಾನಂದಪ್ಪ.ಎಸ್, ದೈಹಿಕಶಿಕ್ಷಣ ನಿರ್ದೇಶಕರಾದ ಡಾ.ಚಂದ್ರಶೇಖರ್.ಆರ್, ಪರಿಸರ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ.ತಿರುಮಲ.ಟಿ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಸೌಮ್ಯ.ಬಿ.ಬಿ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಮಮತಾ ಹೆಚ್.ಸಾಹುಕಾರ್, ಇತಿಹಾಸ ವಿಭಾಗದ ಮುಖ್ಯಸ್ಥರಾದ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಶಮಾ ತುಮ್ಮಿನಕಟ್ಟಿ, ಪರೀಕ್ಷಾ ಸಮಿತಿ ಸಂಯೋಜಕರಾದ ಡಾ.ಗಂಗರಾಜು.ಎಸ್, ಸೈಟ್ಸ್ ಅಂಡ್ ಗೈಡ್ಸ್‌ನ ಲೀಡರ್‌ಗಳಾದ ಡಾ.ಜಿ.ಎನ್.ದ್ರಾಕ್ಷಾಯಿಣಿ ಮತ್ತು ಮನೋಹರ.ಕೆ.ಎಸ್, ಉದ್ಯೋಗ ಕೋಶ ಸಂಯೋಜಕರಾದ ಡಾ.ಯಶೋಧ.ಆರ್, ಪ್ರೇರಣಾ ಕೋಶ ಸಂಯೋಜಕರಾದ ಡಾ.ಶರಣಬಸವರಾಜ್ ಬಿ.ಪಾಟೀಲ್, ಎನ್‌ಎಸ್ಎಸ್ ಕಾರ್ಯಕ್ರಮಾಧಿಕಾರಿ ಹನುಮಂತಪ್ಪ.ಕೆ.ವೈ, ಯುವ ರೆಡ್ ಕ್ರಾಸ್‌ನ ಸಂಚಾಲಕರಾದ ಯೋಗೀಶ್.ಕೆ.ಜೆ, ವಿದ್ಯಾರ್ಥಿ ಕಲ್ಯಾಣಾಧಿಕಾರ ಪ್ರಕಾಶ್ ಜಿ.ಪಿ, ಕಛೇರಿ ಅಧಿಕ್ಷಕರಾದ ಶ್ರೀಮತಿ ಜುಭಿನಾ ತಾಜ್ ಮತ್ತು ಪ್ರಥಮ ದರ್ಜೆ ಸಹಾಯಕರಾದ ಶ್ರೀಮತಿ ಲಕ್ಷ್ಯ.ಎನ್ ಅವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು.
ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ರಾಘವೇಂದ್ರ..ಜಿ.ಪಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಬಾಬು.ಕೆ.ಎ ಅವರು ಸ್ವಾಗತಿಸಿದರು. ಗಣಕವಿಜ್ಞಾನ ವಿಭಾಗದ ಮುಖ್ಯಸ್ಥರಾದ ವೆಂಕಪಪ್ಪನವರ ಬಸವರಾಜು ಅವರು ಕಾರ್ಯಕ್ರಮ ನಿರ್ವಹಿಸಿದರು. ಸಹಸಂಯೋಜಕರಾದ ಅಬ್ದುಲ್ ಬಷೀರ್ ವಂದಿಸಿದರು.

Leave a Reply

Your email address will not be published. Required fields are marked *