ಅನುದಿನ ಕವನ-೨೦೦೩, ಕವಯತ್ರಿ(ತೆಲುಗು ಮೂಲ): ಶ್ರೀ ವೈಷ್ಣವಿ, ಕನ್ನಡಕ್ಕೆ: ಶಿವಕುಮಾರ್ ಕಂಪ್ಲಿ, ದಾವಣಗೆರೆ, ಕವನದ ಶೀರ್ಷಿಕೆ: ಪ್ರೇಮ ಒಂದು ಗಾಯಗೊಂಡ ಕವಿತೆ

ಪ್ರೇಮ ಒಂದು ಗಾಯಗೊಂಡ ಕವಿತೆ

ಗಾಯಗೊಳ್ಳುವುದು ಹವ್ಯಾಸವಾದಮೇಲೆ
ಹೃದಯ ಗೇಯದಲಿ ಹಾಡುವುದೇನೋ….
ಹೇಳಲಾಗ ನೋವು
ಮೌನದಲ್ಲಿ ಮುದುಡಿಕೊಂಡಾಗ
ಚದುರಿಹೋದ ಕನಸುಗಳು
ನೆನಪುಗಳಾಗಿ ಉಳಿವಾಗ
ಕಣ್ಣೀರ ಹನಿಗಳೇ
ಕವಿತೆಯ ಅಕ್ಷರಗಳಾಗುತ್ತವೇನೋ!

ಪ್ರೇಮ ಎಂದಿಗೂ ಹೂವಿನ ದಾರಿಯಲ್ಲ
ಹಲವು ಮುಳ್ಳುಗಳನ್ನು ಹೃದಯದಲ್ಲಿ ಅಡಗಿಸಿಕೊಂಡು
ಹೊರಗೆ ನಗುತ್ತಾ ಸಾಗುತ್ತಾ ಹೋಗೋ
ಒಂದು ಕೊನೆಯಿರದ ಪ್ರಯಾಣ!

ಅದಕ್ಕೆ ಏನೋ….
ಮರೆತು ಹೋದ ಗಾಯಗಳು ಸಹಿತ
ಮೌನವಾಗಿ ಏನನ್ನೋ ಹೇಳುತ್ತಿರುತ್ತವೆ
ಮರೆತು ಹೋಗುತ್ತವೆಂದುಕೊಂಡ ನೆನಪುಗಳು
ಮತ್ತೆ ಮತ್ತೆ ಹಾಡುಗಳಾಗಿ ಪಲಕರಿಸುತ್ತಿರುತ್ತವೆ

ಪ್ರೇಮವೆಂದರೆ ಏನು?

ಒಂದು ಮನಸು ಮತ್ತೊಂದು ಮನಸಿಗೆ
ಬಿಟ್ಟುಹೋದ ಸಿಹಿಯಾದ ಗಾಯ
ಕಾಲ ಅದರ ಮೇಲೆ ತೆರಿಗೆ ವಿಧಿಸಿದರೂ
ನೆನಪುಗಳ ಗಾಳಿ ತಾಗಿದಾಗಲೆಲ್ಲಾ
ಮತ್ತೆ ಶ್ರುತಿ ಗೊಂಡು ಬರುವ
ಒಂದು ನಿಶ್ಯಬ್ದ ಸಂಗೀತ!

ಪ್ರೇಮವೊಂದು ಗಾಯಗೊಂಡ ಹಾಡು..

ಹೃದಯದಲ್ಲಿ ಹುಟ್ಟಿ
ಕಣ್ಣೀರಧಾರೆಗಳಲಿ ಅಕ್ಷರಗಳಾಗಿ
ಮೌನದ ತುಟಿಗಳ ಮೇಲೆ
ಜೀವನಾಂತ ಕೇಳಿಸೋ
ಒಂದು ಅಂತ್ಯವಾಗದ ಗೀತೆ!

ತೆಲುಗು ಮೂಲ: ಶ್ರೀ ವೈಷ್ಣವಿ

ಕನ್ನಡಕ್ಕೆ: ಶಿವಕುಮಾರ್ ಕಂಪ್ಲಿ, ದಾವಣಗೆರೆ

Leave a Reply

Your email address will not be published. Required fields are marked *