
ಬಳ್ಳಾರಿ, ಅ.22: ಕಿಷ್ಕಿಂದ ವಿಶ್ವವಿದ್ಯಾಲಯದ ಎರಡನೇಯ ಘಟಿಕೋತ್ಸವ ಶನಿವಾರ(ಅ.24) ಬಳ್ಳಾರಿ-ಸಿರುಗುಪ್ಪ ರಸ್ತೆ ಮಾರ್ಗದಲ್ಲಿರುವ ಮೌಂಟ್ ವ್ಯೂ ಕ್ಯಾಂಪಸ್ನಲ್ಲಿ ಆಯೋಜಿಸಲಾಗಿದೆ ಎಂದು ವಿವಿ ಕುಲಸಚಿವ ಡಾ. ಯು. ಈರಣ್ಣ ಅವರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು,
ಘಟಿಕೋತ್ಸವದಲ್ಲಿ ಕಿಷ್ಕಿಂದ ವಿಶ್ವವಿದ್ಯಾಲಯದ ಬಿಸಿಎ, ಎಂಬಿಎ, ಎಂಸಿಎ, ಮತ್ತು ಎಂಟೆಕ್ ಕೋರ್ಸ್ಗಳ ವಿದ್ಯಾರ್ಥಿಗಳ ಪದವಿ ಪ್ರದಾನ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಹಾಗೂ ರ್ಯಾಂಕ್ ವಿಜೇತಕರಿಗೆ ಪದಕ ಪ್ರದಾನ ಮಾಡಲಾಗುವುದು.
ಈ ಘಟಿಕೋತ್ಸವ ಸಮಾರಂಭಕ್ಕೆ ಕರ್ನಾಟಕದ ಸರಕಾರದ ಉನ್ನತ ಶಿಕ್ಷಣ ಸಚಿವರು ಹಾಗೂ ವಿಶ್ವವಿದ್ಯಾಲಯದ ಸಹ ಸಂದರ್ಶಕರಾದ ಬಸವರಾಜ ರಾಯರೆಡ್ಡಿ ಅವರು ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದ್ದಾರೆ.
ಭಾರತೀಯ ಸಂಶೋಧನಾ ಸಂಸ್ಥೆಯ (ಇಸ್ರೊ), ಟೆಲಿಮೆಟ್ರಿ ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್ವರ್ಕ್ನಲ್ಲಿ ಹಿರಿಯ ವಿಜ್ಞಾನಿ ಹಾಗೂ ಇಂಜಿನಿಯರ್ ರೂಪಾ ಎಂ.ವಿ. ಅವರು ಘಟಿಕೋತ್ಸವ ಭಾಷಣ ಮಾಡಲಿದ್ದಾರೆ.
ಹಿರಿಯ ರಾಜಕೀಯ ಮುತ್ಸದ್ದಿ ಹಾಗೂ ಮಾಜಿ ಸಚಿವರಾದ ಬಿ.ಆರ್. ಯಾವಗಲ್ ಅವರು ಗೌರವ ಅತಿಥಿಗಳಾಗಿ ಭಾಗವಹಿಸಿಲಿದ್ದಾರೆ ಎಂದು ತಿಳಿಸಿದ್ದಾರೆ.
ಉದ್ಯಮಿ, ತಂತ್ರಜ್ಞಾನದ ರೂವಾರಿಗಳಾದ ಗಿರೀಶ್ ರಾಮಣ್ಣ ಅವರಿಗೆ ಇದೇ ಸಂದರ್ಭದಲ್ಲಿ ಕಿಷ್ಕಿಂದ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ (ಹಾನರಿಸ್ ಕಾಸಾ) ಪ್ರದಾನ ಮಾಡಲಾಗುತ್ತದೆ. ಗಿರೀಶ್ ಅವರು ತಮ್ಮ ಕ್ಯು-ಸ್ಪೈಡರ್ಸ್ ಮತ್ತು ಜೆ-ಸ್ಪೈಡರ್ಸ್ ಸಂಸ್ಥೆಯ ಮೂಲಕ ಸಹಸ್ರಾರು ಯುವಕರಿಗೆ ಆಧುನಿಕ ತರಬೇತಿ ಮತ್ತು ಕೌಶಲ್ಯಗಳನ್ನು ನೀಡುವ ಮೂಲಕ ಯುವಕರಿಗೆ ಉದ್ಯೋಗ ಕಲ್ಪಿಸಿ, ಸಮಾಜದ ಅಭಿವೃದ್ಧಿಗೆ ಕಾರಣೀಭೂತರಾಗಿದ್ದಾರೆ. ಅಂತೆಯೇ, ಇವರ ಮೌಲ್ಯಾಧರಿತವಾದ ತಾಂತ್ರಿಕ ಶಿಕ್ಷಣ ವಲಯದ ಸೇವೆಯನ್ನು ಗುರುತಿಸಿ, ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಶೈಕ್ಷಣಿಕ ಸಾಧನೆಯಲ್ಲಿ ಉನ್ನತ ಸ್ಥಾನಗಳಿಸಿದ ವಿದ್ಯಾರ್ಥಿಗಳನ್ನು ಘಟಿಕೋತ್ಸವದಲ್ಲಿ ಗೌರವಿಸಲಾಗುತ್ತಿದೆ. ಬಿಸಿಎ ಪದವಿಯ ವಿಭಾಗದಲ್ಲಿ, ಕುಮಾರಿ ಶೃತಿ ಅವರು 9.72 ಸಿಜಿಪಿಎದೊಂದಿಗೆ ಪ್ರಥಮ ರ್ಯಾಂಕ್ ಪಡೆದು ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. ಕು. ಎಂ. ಲತಾ ಅವರು 9.65 ಸಿಜಿಪಿಎದೊಂದಿಗೆ ದ್ವಿತೀಯ ರ್ಯಾಂಕ್ ಪಡೆದು ಬೆಳ್ಳಿಯ ಪದಕವನ್ನು ಸ್ವೀಕರಿಸಲಿದ್ದಾರೆ.

ಎಂಬಿಎ ವಿಭಾಗದಲ್ಲಿ, ಕು. ಶ್ವೇತಾ ಜಿ ಅವರು 9.77 ಸಿಜಿಪಿಎದೊಂದಿಗೆ ಪ್ರಥಮ ರ್ಯಾಂಕ್ ಪಡೆದು ಚಿನ್ನದ ಪದಕವನ್ನು ಸ್ವೀಕರಿಸಲಿದ್ದು, ಕು. ಮರಾಠಿ ಸಾಹಿತ್ಯ ಅವರು 9.69 ಸಿಜಿಪಿಎದೊಂದಿಗೆ ದ್ವಿತೀಯ ರ್ಯಾಂಕ್ ಪಡೆದು ಬೆಳ್ಳಿಯ ಪದಕವನ್ನು ಸ್ವೀಕರಿಸಲಿದ್ದಾರೆ.
ಎಂಸಿಎ ವಿಭಾಗದಲ್ಲಿ, ಕು. ಆರ್.ಎಂ. ಸುಹಾನಾ ಸಹ್ರೀನ್ ಅವರು 9.90 ಸಿಜಿಪಿಎದೊಂದಿಗೆ ಪ್ರಥಮ ರ್ಯಾಂಕ್ ಪಡೆದು ಚಿನ್ನದ ಪದಕವನ್ನು ಸ್ವೀಕರಿಸಲಿದ್ದು, ಕು. ಪೆದ್ದದೇವರ ನಜ್ನೀನ್ ಅವರು 9.73 ಸಿಜಿಪಿಎದೊಂದಿಗೆ ದ್ವಿತೀಯ ರ್ಯಾಂಕ್ ಪಡೆದು ಬೆಳ್ಳಿಯ ಪದಕವನ್ನು ಸ್ವೀಕರಿಸಲಿದ್ದಾರೆ.
ಎಂಟೆಕ್ ವಿಭಾಗದಲ್ಲಿ, ಕು. ಪಿ. ಸಹನಾ ಪ್ರಸಾದ್ ಅವರು 9.31 ಸಿಜಿಪಿಎದೊಂದಿಗೆ ಪ್ರಥಮ ರ್ಯಾಂಕ್ ಪಡೆದು ಚಿನ್ನದ ಪದಕವನ್ನು ಸ್ವೀಕರಿಸಲಿದ್ದು, ಎಂ. ರಾಘವೇಂದ್ರ ಅವರು 9.29 ಸಿಜಿಪಿಎದೊಂದಿಗೆ ದ್ವಿತೀಯ ರ್ಯಾಂಕ್ ಪಡೆದು ಬೆಳ್ಳಿಯ ಪದಕವನ್ನು ಸ್ವೀಕರಿಸಲಿದ್ದಾರೆ.
ಬಿಸಿಎ ವಿಭಾಗದಲ್ಲಿ 20 ಪುರುಷ ಮತ್ತು 24 ಮಹಿಳೆ ಒಟ್ಟು 44 ವಿದ್ಯಾರ್ಥಿಗಳು ಪದವಿ ಸ್ವೀಕರಿಸಲಿದ್ದಾರೆ. ಎಂಬಿಎ ವಿಭಾಗದಲ್ಲಿ 33 ಪುರುಷ ಮತ್ತು 18 ಮಹಿಳೆ ಒಟ್ಟು 51 ವಿದ್ಯಾರ್ಥಿಗಳು ಪದವಿ ಸ್ವೀಕರಿಸಲಿದ್ದಾರೆ. ಎಂಸಿಎ ವಿಭಾಗದಲ್ಲಿ 22 ಪುರುಷ ಮತ್ತು 20 ಮಹಿಳೆ ಒಟ್ಟು 42ವಿದ್ಯಾರ್ಥಿಗಳು ಪದವಿ ಸ್ವೀಕರಿಸಲಿದ್ದಾರೆ. ಎಂಟೆಕ್ ವಿಭಾಗದಲ್ಲಿ 11 ಪುರುಷ ಮತ್ತು 7 ಮಹಿಳೆ ಒಟ್ಟು 18 ವಿದ್ಯಾರ್ಥಿಗಳು ಪದವಿ ಸ್ವೀಕರಿಸಲಿದ್ದಾರೆ. ಒಟ್ಟಾರೆಯಾಗಿ 155 ವಿದ್ಯಾರ್ಥಿಗಳು ಪದವಿಯನ್ನು ಸ್ವೀಕರಿಸಲಿದ್ದಾರೆ ಎಂದು ವಿವರಿಸಿದ್ದಾರೆ.
ಘಟಿಕೋತ್ಸವ ಸಮಾರಂಭದಲ್ಲಿ ಕುಲಾಧಿಪತಿ ಡಾ. ಯಶವಂತ್ ಭೂಪಾಲ್, ಕುಲಪತಿ ಪ್ರೊ. ಟಿ.ಎನ್. ನಾಗಭೂಷಣ, ಸಹಕುಲಾಧಿಪತಿ ವೈ.ಜೆ. ಪೃಥ್ವಿರಾಜ್ ಭೂಪಾಲ್, ಕುಲಸಚಿವರು ಡಾ. ಯು. ಈರಣ್ಣ, ಕುಲಸಚಿವ (ಮೌಲ್ಯಮಾಪನ) ಡಾ. ರಾಜು ಜಾಡರ್ ಹಾಗೂ ಹಣಕಾಸು ಅಧಿಕಾರಿ ಶ್ರೀಮತಿ ವೈ. ನಮ್ರತಾ ಅವರು ಭಾಗವಹಿಸಲಿದ್ದಾರೆ. ವಿಶ್ವವಿದ್ಯಾಲಯದ ಎಲ್ಲಾ ನಿಕಾಯಗಳ ಡೀನ್ಗಳು ಮತ್ತು ಎಲ್ಲಾ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿರುವರು.
ಸವಿನೆನಪು: ಕಿಷ್ಕಿಂದ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವ ಕಳೆದ ವರ್ಷ ಡಿ. 24, ರಂದು ಆಯೋಜಿಸಲಾಗಿತ್ತು. ಅಂದಿನ ಕರ್ನಾಟಕದ ರಾಜ್ಯಪಾಲರು ಹಾಗೂ ವಿಶ್ವವಿದ್ಯಾಲಯದ ವಿಸಿಟರ್ಗಳಾದ ಥಾವರ್ಚಂದ್ ಗೆಹ್ಲೋಟ್, ಅಂದಿನ ಉನ್ನತ ಶಿಕ್ಷಣ ಸಚಿವರು ಹಾಗೂ ಪ್ರೋ-ವಿಸಿಟರ್ಗಳಾದ ಡಾ. ಎಂ.ಸಿ. ಸುಧಾಕರ್ ಅವರು ಭಾಗವಹಿಸಿದ್ದರು. ವಳ ಬಳ್ಳಾರಿ ಗ್ರಾಮದ ಸುವರ್ಣಗಿರಿ ವಿರಕ್ತ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಅವರಿಗೆ ಕಿಷ್ಕಿಂದ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ನೀಡಿದ್ದನ್ನು ವಿವಿ ಸ್ಮರಿಸಿದೆ.
