ವಿಎಸ್‌ಕೆಯು ನೂತನ ಪರೀಕ್ಷಾಂಗ ಕುಲಸಚಿವರಾಗಿ ಪ್ರೊ. ಪಿ. ಕಣ್ಣನ್ ಅಧಿಕಾರ ಸ್ವೀಕಾರ

ಬಳ್ಳಾರಿ,ನ.6: ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ನೂತನ ಮೌಲ್ಯಮಾಪನ (ಪರೀಕ್ಷಾಂಗ) ಕುಲಸಚಿವರಾಗಿ ಪ್ರೊ. ಪಿ. ಕಣ್ಣನ್ ಅವರು ಶುಕ್ರವಾರ ಅಧಿಕಾರ ವಹಿಸಿಕೊಂಡರು.
ವಿಶ್ವವಿದ್ಯಾಲಯದ ಆಡಳಿತ ಕಚೇರಿಯಲ್ಲಿ  ಅಧಿಕಾರ ಸ್ವೀಕರಿಸಿದ ಪ್ರೊ. ಪಿ. ಕಣ್ಣನ್ ಅವರು ಮೂಲತಃ ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಹಿರಿಯ ಪ್ರಾಧ್ಯಾಪಕರಾಗಿದ್ದಾರೆ.
ಈವರೆಗೆ ವಿಎಸ್‌ಕೆಯು ಮೌಲ್ಯಮಾಪನ ಕುಲಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದ ಪ್ರೊ. ಎನ್. ಎಂ. ಸಾಲಿಯ ಅವರನ್ನು ಮಾತೃ ಸಂಸ್ಥೆಗೆ ಮರಳಿ ವರ್ಗಾಯಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
——–

Leave a Reply

Your email address will not be published. Required fields are marked *