ಬಳ್ಳಾರಿಯ ಸೂರ್ಯಕಾಲೋನಿ, ತಿಲಕ್ ನಗರ ಸೇರಿ ಕೆಲವು ಪ್ರದೇಶಗಳಲ್ಲಿ ನ. 7ರಂದು ವಿದ್ಯುತ್ ವ್ಯತ್ಯಯ

ಬಳ್ಳಾರಿ,ನ.5: ನಗರದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಹಿನ್ನೆಲೆಯಲ್ಲಿ ವಿದ್ಯುತ್ ಕಂಬಗಳ ಸ್ಥಳಾಂತರ ಕಾರ್ಯ ಕೈಗೊಳ್ಳುತ್ತಿರುವುದರಿಂದ ನ. 7 ರಂದು ಶನಿವಾರ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಜೆಸ್ಕಾಂ ನಗರ ಉಪವಿಭಾಗ-1ರ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.
220/11 ಕೆವಿ ಅಲ್ಲೀಪುರ ವಿದ್ಯುತ್ ಉಪಕೇಂದ್ರದ ಎಫ್-72 (11 ಕೆವಿ) ಫೀಡರ್ ವ್ಯಾಪ್ತಿಯಲ್ಲಿ ಅಂದು ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ.
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:
ತಿಲಕ್ ನಗರ, ರಹೀಮಾಬಾದ್ ಕಾಲೋನಿ, ನಂದಿ ಸ್ಕೂಲ್ ಹಿಂಭಾಗ, ಸೂರ್ಯ ಕಾಲೋನಿ, ವಿಜಯ ನಗರ ಕಾಲೋನಿ, ಆದರ್ಶ ಕಾಲೋನಿ, ಕೆ.ಎಚ್.ಬಿ. ಕಾಲೋನಿ, ತಿರುಮಲ ಸಾಯಿ ಅಪಾರ್ಟ್ ಮೆಂಟ್, ಟಿಂಕರ್ ಸ್ಟ್ರೀಟ್, ಗಾಂಧಿ ಚೌಕ ಹಾಗೂ ಭಾಸ್ಕರ್ ನಾಯ್ಡು ಸ್ಟ್ರೀಟ್.
ಈ ಹಿನ್ನಲೆಯಲ್ಲಿ  ಸಾರ್ವಜನಿಕರು ಹಾಗೂ ಗ್ರಾಹಕರು ಈ ವ್ಯತ್ಯಯಕ್ಕೆ ಸಹಕರಿಸಬೇಕೆಂದು ಪ್ರಕಟಣೆಯಲ್ಲಿ ಕೋರಲಾಗಿದೆ.
———-

Leave a Reply

Your email address will not be published. Required fields are marked *