ಅನುದಿನ ಕವನ-೨೦೧೮, ಕವಿ:ಲೋಕಿ (ಲೋಕೇಶ್ ಮನ್ವಿತಾ), ಬೆಂಗಳೂರು

ಸುಲಭವಾಗಿಸಿಕೊಂಡು ಬಿಟ್ಟೆ
ಕನಸುಗಳನ್ನು
ತಿರುಗಿಸಿ ನೋಡಿಕೊಳ್ಳುವುದನ್ನು

ತೊರೆದ ಮೇಲಷ್ಟೇ
ಖಾಲಿತನದ ಗಮನವು
ಸೃಷ್ಟವಾಗತೊಡಗಿತು

ಬುದ್ದಿ ಶಕ್ತಿಯೇ
ಬಂಧಿಯಾಗಿರುವಾಗ
ಚಲನ ಶಕ್ತಿಯು ಯಾಂತ್ರಿಕವೇ

ಜಿನಗುತಿರುವ ನೋವಿಗೆ
ಅಳುವಿನ ಸ್ವರೂಪ
ಕಣ್ಣಿ ಆಗಿರಬೇಕಂತಲೂ ಇಲ್ಲ

ಮೊದಮೊದಲು ನೀ
ಊರ ದಾರಿಯಲ್ಲಿ ಕಾಣಿಸಿಕೊಂಡಾಗ
ಹೂಗಳು ಸೊರಗಿ ಹೋಗಿದ್ದವು

ಈಗೀಗ ಅನಿಸುತ್ತಿದೆ
ನೀ ತಿರುಗಿ ನೋಡಿದಾಗಲೊಮ್ಮೆ
ನಾ ಇನ್ನು ಜೀವಂತವಾಗಿರುವೆನೆಂದು

-ಲೋಕಿ (ಲೋಕೇಶ್ ಮನ್ವಿತಾ), ಬೆಂಗಳೂರು

Leave a Reply

Your email address will not be published. Required fields are marked *