ಭಾರತೀಯ ಬೌದ್ಧ ಮಹಾಸಭಾ ಬಳ್ಳಾರಿ ಜಿಲ್ಲಾ ಸಮಿತಿ ನೂತನ ಅಧ್ಯಕ್ಷರಾಗಿ ಪತ್ರಕರ್ತ ಸಿ.ಶಿವರಾಮ ಸಿರಿಗೇರಿ, ಮಾರ್ಗದರ್ಶಕರಾಗಿ ಎರಕುಲಸ್ವಾಮಿ, ಡಾ. ಅಪ್ಪಗೆರೆ ನೇಮಕ

ಬಳ್ಳಾರಿ. ನ.19: ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರಿಂದ ಸ್ಥಾಪಿತವಾದ ಭಾರತೀಯ ಬೌದ್ಧ ಮಹಾಸಭಾ(BSI) ಬಳ್ಳಾರಿ ಜಿಲ್ಲಾ ಸಮಿತಿ ನೂತನ ಅಧ್ಯಕ್ಷರಾಗಿ ಪತ್ರಕರ್ತ ಸಿ.ಶಿವರಾಮ ಸಿರಿಗೇರಿ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಸ್ವರೂಪ್ ಫುಲೆ ಅವರು ನೇಮಕವಾಗಿದ್ದಾರೆ.

ನಗರದ ಬಳ್ಳಾರಿ ಜಿಲ್ಲಾ ಡಾ.‌ಬಿ ಆರ್ ಅಂಬೇಡ್ಕರ್ ಸಂಘದ ಸಭಾಂಗಣದಲ್ಲಿ ಬುಧವಾರ ಜರುಗಿದ ಜಿಲ್ಲಾ ಸಮಿತಿ ವಾರ್ಷಿಕ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ನೇಮಿಸಲಾಯಿತು.

ಸಿ.‌ ಶಿವರಾಮ ಸಿರಿಗೇರಿ

ಬಿಎಸ್ಐ ಜಿಲ್ಲಾಧ್ಯಕ್ಷ ಕಮಲರತ್ನ ಭಂತೇಜಿ ಅವರ ಅಧ್ಯಕ್ಷತೆ, ಬಿಎಸ್ಐ ರಾಷ್ಟ್ರೀಯ ಉಪಾಧ್ಯಕ್ಷ, ಕರ್ನಾಟಕ ಉಸ್ತುವಾರಿ ಮಲ್ಲಿಕಾರ್ಜುನ ಭಾಲ್ಕಿ, ಉತ್ತರ ಕರ್ನಾಟಕ ವಿಭಾಗ ಅಧ್ಯಕ್ಷರಾದ ಮನೋಹರ್ ಮೋರೆ ಅವರ ಸಮ್ಮುಖದಲ್ಲಿ ನಾಲ್ವರು ಉಪಾಧ್ಯಕ್ಷರು, ಖಜಾಂಚಿ ಅವರನ್ನು ನೇಮಿಸಲಾಯಿತು.
ಜಿಲ್ಲಾ ಸಮಿತಿ ಉಪಾಧ್ಯಕ್ಷರಾಗಿ ಅಗಸನೂರು ಹುಸೇನಪ್ಪ, ಬೂದುಗುಪ್ಪ ಸಿ.ಚಿದಾನಂದ, ಎಮ್ಮಿಗನೂರು ಮಾರುತಿ ಮತ್ತು ಮಹಿಳಾ ವಿಭಾಗದ ಸಂಗೀತಾ.ಪಿ, ಖಜಾಂಚಿಯಾಗಿ
ಕುರುವಳ್ಳಿ ಶೇಖರ್, ಸಹ ಕಾರ್ಯದರ್ಶಿಯಾಗಿ ಗಾದಿಲಿಂಗಪ್ಪ ಅವರು,
ಬಿಎಸ್ಐ ಮಾಜಿ ರಾಜ್ಯಾಧ್ಯಕ್ಷ, ಹಿರಿಯ ಸಾಹಿತಿ ಡಾ. ವೆಂಕಟಯ್ಯ ಅಪ್ಪಗೆರೆ, ಜಿಲ್ಲಾ ಡಾ. ಬಿ ಆರ್ ಅಂಬೇಡ್ಕರ್ ಸಂಘದ ಪ್ರಧಾನ ಕಾರ್ಯದರ್ಶಿ ಎಂ. ವಿ ಎರಕುಲಸ್ವಾಮಿ ಮತ್ತು ಸಮಿತಿಯ ಅಖಂಡ ಬಳ್ಳಾರಿ ಜಿಲ್ಲಾ ಮಾಜಿ ಅಧ್ಯಕ್ಷ, ಹಿರಿಯ ಪತ್ರಕರ್ತ ಸಿ.ಮಂಜುನಾಥ ಅವರನ್ನು ಜಿಲ್ಲಾ ಸಮಿತಿಯ ಮಾರ್ಗದರ್ಶಕರೆಂದು ಮಲ್ಲಿಕಾರ್ಜುನ ಭಾಲ್ಕಿ ಅವರು ಪ್ರಕಟಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಕಮಲರತ್ನ ಬಂತೆೇಜಿ ಅವರು,ಜಿಲ್ಲಾ ಸಮಿತಿಯಿಂದ ದಮ್ಮ ಯಾತ್ರೆ ಕೈಗೊಳ್ಳುವುದು, ಜನರಲ್ಲಿ ಧಮ್ಮ ಪ್ರಜ್ಞೆ ಮೂಡಿಸುವುದು, ಮೂಢನಂಬಿಕೆಯನ್ನು ತೊಲಗಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಸಮಿತಿಯ ರಾಷ್ಟ್ರೀಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಭಾಲ್ಕಿ  ಅವರು ಮಾತನಾಡಿ 1954 ರಲ್ಲಿ ಬಾಬಾ ಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ಅವರು ಬಿಎಸ್ಐ ನ್ನು ಸ್ಥಾಪಿಸಿ ಸಾಮಾನ್ಯ ಜನರು ಅನುಭವಿಸುತ್ತಿದ್ದ ಸಮಸ್ಯೆಗಳನ್ನು ಹೋಗಲಾಡಿಸುವ ದಿಟ್ಟತನದ ಕಾರ್ಯಕ್ರಮ ಮತ್ತು ಬುದ್ಧ ಧರ್ಮ ಮೂಲಕ ಕಂದಾಚಾರಗಳನ್ನು ತೊಡೆದು ಹಾಕುವ ಕೆಲಸ ಮಾಡಿದರು ಎಂದು ಹೇಳಿದರು.
ಭಾರತದಲ್ಲಿ ಹುಟ್ಟಿದ
ಬೌದ್ಧ ಧರ್ಮವು ಮೌಢ್ಯದಿಂದ ಹೊರಬರುವ, ಪಂಚಶೀಲಗಳಿಂದ ಮನುಷ್ಯನನ್ನು ಸರಿದಾರಿಗೆ ತರುವ ಕೆಲಸವನ್ನು ಮಾಡುತ್ತದೆ ಎಂದು ತಿಳಿಸಿದರು.


ಮನೋಹರ್ ಮೋರೆ ಅವರು ಮಾತನಾಡಿ ಅಂತರಾಷ್ಟ್ರೀಯ ಮಟ್ಟದ ಮಾನ್ಯತೆ ಪಡೆದ ಈ ಸಂಘವು ತುಂಬಾ ವ್ಯವಸ್ಥಿತವಾಗಿದೆ. ಶಿಸ್ತು ಕಲಿಸುವ, ಒಳ್ಳೆಯ ಜೀವನ ನಡೆಸಲು ಸಹಕಾರಿಯಾಗಿದೆ.
ದೇಶದ 26 ರಾಜ್ಯಗಳಲ್ಲಿ ಸಕ್ರೀಯವಾಗಿರುವ ಶಾಂತಿ ಪ್ರಜ್ಞೆ ಬೆಳೆಸುವ ಉದ್ದೇಶವನ್ನು ಹೊಂದಿದೆ ಎಂದು ವಿವರಿಸಿದರು.                                                   ಡಾ. ವೆಂಕಟಯ್ಯ ಅಪ್ಪಗೆರೆ ಅವರು ಮಾತನಾಡಿ ನಮ್ಮ ಜಿಲ್ಲೆಯಲ್ಲಿನ ನಿಟ್ಟೂರು ಉಡೆಗೋಳ ಮತ್ತು ಬಳ್ಳಾರಿ ಪಕ್ಕದ ಅಶೋಕ ಸಿದ್ದಾಪುರದ ಶಾಸನಗಳನ್ನು ಅಭಿವೃದ್ಧಿಗೊಳಿಸುವ ಮತ್ತು ಬುದ್ಧನ ಕುರಿತು ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ ಎಂದು ತಿಳಿಸಿದರು.


ಜಿಲ್ಲಾ ಡಾ. ಬಿ ಆರ್ ಅಂಬೇಡ್ಕರ್ ಸಂಘದ ಮಾಜಿ ಅಧ್ಯಕ್ಷರೂ ಹಾಲಿ ಪ್ರದಾನ ಕಾರ್ಯದರ್ಶಿ ಎಂ. ವಿ. ಎರಕುಲ ಸ್ವಾಮಿ ಅವರು ಮಾತನಾಡಿ, ನಮಗೆ ಬುದ್ಧ ಮತ್ತು ಬಾಬಾಸಾಹೇಬರು ಒಂದೇ ನಾಣ್ಯದ ಎರಡು ಮುಖಗಳು. ಇವರ ಮಾರ್ಗದಲ್ಲಿ ನಡೆದರೆ ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ಪ್ರಚಾರದ ಮೂಲಕ ಎಲ್ಲರಲ್ಲೂ ಬುದ್ಧನ ಪ್ರಜ್ಞೆ ಬೆಳೆಸುವುದು ಅವಶ್ಯವಿದೆ ಎಂದು ತಿಳಿಸಿದರು.
ಹಿರಿಯ ಪತ್ರಕರ್ತ ಸಿ.ಮಂಜುನಾಥ ಅವರು ಮಾತನಾಡಿ ವಿಶ್ವದಲ್ಲಿ ಬುದ್ಧ ಧಮ್ಮ ವೇಗವಾಗಿ ಬೆಳೆಯುತ್ತಿದೆ. ಬೌದ್ಧ ನೆಲೆಗಳಿರುವ ಜಿಲ್ಲೆಯಲ್ಲಿ ಬುದ್ಧನ ಆರಾಧಕರು, ವಿಹಾರಗಳು ಹೆಚ್ಚುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು. ಬಿಎಸ್ಐ ಮನುಷ್ಯರಲ್ಲಿ ಮತ್ತು ಸಮಾಜದಲ್ಲಿ  ಶಾಂತಿ & ಶಿಸ್ತನ್ನು ಕಲಿಸುವ ಶಕ್ತಿ ಹೊಂದಿದೆ. ಬುದ್ಧ ಧಮ್ಮದ ಕುರಿತು ಕಿರು ಪುಸ್ತಕಗಳನ್ನು ಮುದ್ರಿಸಿ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಡಾ. ಬಿ ಆರ್ ಅಂಬೇಡ್ಕರ್ ಸಂಘದ ಮಾಜಿ ಅಧ್ಯಕ್ಷರಾದ ಕೆ. ಗಿರಿಮಲ್ಲಪ್ಪ, ಉಪಾಸಕರು ಪಾಲ್ಗೊಂಡಿದ್ದರು.
ಇದೆ ವೇಳೆ ಸಂಘಕ್ಕೆ ಸದಸ್ಯರನ್ನು ನೊಂದಾಯಿಸಿ ಗುರುತಿನ ಚೀಟಿ ನೀಡಲಾಯಿತು.

Leave a Reply

Your email address will not be published. Required fields are marked *