ಮಳೆ ಎಷ್ಟು ಜೋರಾಗಿತ್ತೆಂದರೆ
ಮುಳುಗಿ ಹೋಯಿತು ಮೌನದಲ್ಲಿ
ಇಡೀ ರಸ್ತೆ.
ಯಾವ ಹೆಜ್ಜೆಗಳ ಸಪ್ಪಳವಿಲ್ಲ,
ಯಾವ ಗಾಡಿಗಳ ಕಿರಿಚಾಟವಿಲ್ಲ,
ಯಾರೂ ಆಹ್ವಾನಿಸುತ್ತಿಲ್ಲ ಯಾರನ್ನೂ
ತಮ್ಮ ಮನೆಗೆ-
ಕೇವಲ ನಾನು ಮಾತ್ರ
ಹಾಯ್ದು ಹೋಗುತ್ತಿದ್ದೇನೆ ಮಳೆಯನ್ನು,
ಹೇಳದೇ ಹೋದ ಸಂಗತಿಗಳನ್ನೆಲ್ಲ
ಹೊತ್ತುಕೊಂಡು.
ಆ ರಾತ್ರಿ ಅನಿಸಿತು ನನಗೆ,
ನನ್ನ ಮೌನಕ್ಕೂ ಕೊನೆಗೆ ಗೊತ್ತಾಗಿದೆಯೆಂದು
ತಂಗಲು ಎಲ್ಲೋ ಒಂದು ಕಡೆ
ಜಾಗವಿದೆಯೆಂದು.

🌿-ಚಿದಂಬರ ನರೇಂದ್ರ, ಬೆಂಗಳೂರು
