
ಬಳ್ಳಾರಿ, ನ.24: ಕರ್ನಾಟಕ ರಾಜ್ಯ ಬೀದಿ ನಾಟಕ ಕಲಾತಂಡಗಳ ಒಕ್ಕೂಟ ಬೆಂಗಳೂರು ಹಾಗೂ ಬಳ್ಳಾರಿ ಜಿಲ್ಲಾ ಬೀದಿ ನಾಟಕ ಮತ್ತು ಜಾನಪದ ಸಂಗೀತ ಕಲಾವಿದರ ಒಕ್ಕೂಟ ಬಳ್ಳಾರಿ. ಬಳ್ಳಾರಿ ಜಿಲ್ಲಾ ಒಕ್ಕೂಟದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಗರದ ಮಂಡ್ಲೂರು ರಾಮಪ್ಪ ಸಭಾಂಗಣದಲ್ಲಿ ಭಾನುವಾರ ಜರುಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ರಂಗಭೂಮಿ ಕಲಾವಿದ ಶಿವೇಶ್ವರ ಗೌಡ ಕಲ್ಲುಕಂಬ ಅವರು ಮಾತನಾಡಿ, ಬೀದಿ ನಾಟಕ ಒಕ್ಕೂಟ ನಮ್ಮ ಬಳ್ಳಾರಿ ಜಿಲ್ಲೆಯಲ್ಲಿ ಪ್ರಾರಂಭವಾಗಿರುವುದು ನಮ್ಮೆಲ್ಲರಿಗೆ ಖುಷಿ ತಂದಿದೆ ಎಂದರು. ನಾಟಕ, ಬೀದಿ ನಾಟಕಗಳನ್ನ ಕಟ್ಟಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ, ಕಲೆಗಳನ್ನು ಮುಂದಿನ ದಿನಮಾನಗಳಲ್ಲಿ ಒಕ್ಕೂಟದ ಎಲ್ಲಾ ಕಲಾವಿದರು ಯಾವುದೇ ಕಪ್ಪು ಚುಕ್ಕೆ ಇಲ್ಲದಂತೆ ಮತ್ತು ಸಾಮಾಜಿಕವಾಗಿ ಅರಿವು ಮೂಡಿಸುವಲ್ಲಿ ಮುಖ್ಯ ಪಾತ್ರ ವಹಿಸಬೇಕು ಎಂದು ಅವರು ತಿಳಿಸಿದರು. ಒಕ್ಕೂಟದ ರಾಜ್ಯ ಸಮಿತಿ ಸದಸ್ಯ ಪಿ. ಚಮನ್ ಸಾಬ್ ಅವರು ಮಾತನಾಡಿ ನಮ್ಮ ಬಳ್ಳಾರಿ ಜಿಲ್ಲೆಯಲ್ಲಿ ಬೀದಿ ನಾಟಕ ಮತ್ತು ಜಾನಪದ ಸಂಗೀತ ಕಲಾವಿದರ ಒಕ್ಕೂಟ ಪ್ರಾರಂಭವಾಗಿದ್ದು ನಮಗೆ ಖುಷಿ ತಂದಿದೆ ಹಾಗಾಗಿ ರಾಜ್ಯ ಒಕ್ಕೂಟ ಯಾವಾಗಲೂ ಬೆಂಬಲವಾಗಿ ನಿಮ್ಮ ಒಕ್ಕೂಟಕ್ಕೆ ನಿಲ್ಲುತ್ತದೆ ನಾವು ಒಕ್ಕೂಟಗಳನ್ನು ಬಲಪಡಿಸಿದಾಗ ರಾಜ್ಯದ ಬೀದಿ ನಾಟಕ ಒಕ್ಕೂಟ ಅತ್ಯಂತ ಅನೇಕ ಕಲಾವಿದರಿಗೆ ಉಪಯೋಗಗಳ ಬಗ್ಗೆ ಮತ್ತೆ ಸರ್ಕಾರದ ಎಲ್ಲಾ ಇಲಾಖೆಗಳ ಕಾರ್ಯಕ್ರಮಗಳನ್ನು ಕೊಡಿಸುವಲ್ಲಿ ಕಲಾವಿದರಿಗೆ ಯಾವುದೇ ರೀತಿಯಿಂದ ಸಮಸ್ಯೆ ಆಗದಂತೆ ಒಕ್ಕೂಟ ಕೆಲಸ ಮಾಡುತ್ತದೆ ಎಂದು ತಮ್ಮ ಅನುಭವದ ನುಡಿಗಳನ್ನು ಹಂಚಿಕೊಂಡರು,
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ಯಲ್ಲನಗೌಡ ಶಂಕರ ಬಂಡೆ ಮಾತನಾಡಿದರು.
ಅತಿಥಿ ಮುದ್ದಟನೂರು ತಿಪ್ಪೇಸ್ವಾಮಿ, ಹಿರಿಯ ರಂಗ ಕಲಾವಿದ ಜೋಳದರಾಶಿ ಬಸವರಾಜ ಮಾತನಾಡಿದರು.
ನೂತನ ಪದಾಧಿಕಾರಿಗಳು:
ಬಳ್ಳಾರಿ ಜಿಲ್ಲಾ ಒಕ್ಕೂಟದ ನೂತನ ಗೌರವಾಧ್ಯಕ್ಷರಾಗಿ ಡಾ. ಅಣ್ಣಾಜಿ ಕೃಷ್ಣಾರೆಡ್ಡಿ, ಅಧ್ಯಕ್ಷರಾಗಿ ಹುಲುಗಪ್ಪ ಎಸ್ ಎಂ, ಉಪಾಧ್ಯಕ್ಷರಾಗಿ ಶ್ರೀಮತಿ ಉಷಾ, ಸಹ ಉಪಾಧ್ಯಕ್ಷರಾಗಿ ಡಾ. ಹುಲಿಗಯ್ಯ ನಾಯಕ, ಕಾರ್ಯದರ್ಶಿಯಾಗಿ ವೈ ಮಂಜುನಾಥ, ಸಹ ಕಾರ್ಯದರ್ಶಿಯಾಗಿ ವೀರೇಶ್ ದಳವಾಯಿ, ಹೆಚ್ ಜಿ ಸುಂಕಪ್ಪ, ಸಂಘಟನಾ ಕಾರ್ಯದರ್ಶಿಯಾಗಿ ಡಿ ಹೇಮಂತ್, ವೈ ತಾಯಪ್ಪ, ಖಜಂಚಿಯಾಗಿ ದೊಡ್ಡ ಹುಸೇನಪ್ಪ, ಸದ್ಯಸರುಗಳಾಗಿ ಶ್ರೀಮತಿ ಎಚ್ ಗಂಗಮ್ಮ, ಶ್ರೀಮತಿ ರೂತಮ್ಮ, ಕುಮಾರಿ ದಿವ್ಯ, ಶ್ರೀಮತಿ ಪ್ರಭಾವತಿ, ಎರಿಸ್ವಾಮಿ, ವಿಜಯಕುಮಾರ್, ಹೆಚ್ ರಮೇಶ್, ಶರಣಬಸವ, ತಿಮ್ಮಪ್ಪ, ನಾಗಮೂರ್ತಿ, ಮುತ್ತಣ್ಣ, ವಿನೋದ ಕುಮಾರ್, ಶ್ರೀಕಾಂತ ಬಡಿಗೇರಿ, ಡಿ ಶಿವಪ್ಪ, ಹರಿಕೃಷ್ಣ,ಕುಮಾರಿ ಮಹೇಶ್ವರಿ, ಲೋಕೇಶ್ ರೆಡ್ಡಿ, ಲೋಕೇಶ್, ಹುಸೇನ್, ಹುಲುಗಪ್ಪ ನವೀನ್, ಲೋಕೇಶ್, ವಿಷ್ಣು, ಆರ್ ಪಿ ಮಂಜುನಾಥ, ಶ್ರೀ ನಾಗರಾಜ್, ಚಂದ್ರು ಬಸಾಪುರ, ರವಿಚಂದ್ರ.
ವೀರೇಶ್ ದಳವಾಯಿ ಪ್ರಾರ್ಥಿಸಿದರು. ನಿರೂಪಣೆ ಯರಿಸ್ವಾಮಿ ನಿರೂಪಿಸಿದರು. ವೈ,ಮಂಜುನಾಥ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಂಕಪ್ಪ ವಂದಿಸಿದರು.
