ತೋರಣಗಲ್ ಪುರಸಭೆ ಚುನಾವಣೆ: ಮೀನಹಳ್ಳಿ ತಾಯಣ್ಣ ಪ್ರಚಾರ

ಬಳ್ಳಾರಿ, ಡಿ.25: ಜಿಲ್ಲೆಯ ಸಂಡೂರು ತಾಲೂಕಿನ ಕುರೇಕುಪ್ಪ ಮತ್ತು ತೋರಣಗಲ್ ನ ಪುರಸಭೆ ಚುನಾವಣೆಯಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳ ಪರವಾಗಿ ಪಕ್ಷದ ಜಿಲ್ಲಾಧ್ಯಕ್ಷ ಮೀನಹಳ್ಳಿ ತಾಯಣ್ಣ ಅವರು ಶನಿವಾರ ವಿಸ್ತೃತ ಪ್ರಚಾರ ನಡೆಸಿ ಮತಯಾಚಿಸಿದರು.
ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆದ ಸಂದರ್ಭದಲ್ಲಿ ಅವರು ಜಾರಿಗೆ ತಂದ ಜನಪರ ಮತ್ತು ರೈತ ಪರ ಯೋಜನೆಗಳನ್ನು ಮನಗಂಡು ಜೆಡಿಎಸ್ ಅಭ್ಯರ್ಥಿಗಳನ್ನು ಮತದಾರರು ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕುರೇಕುಪ್ಪ ಪುರಸಭೆ ಅಭ್ಯರ್ಥಿ ಕುರೇಕುಪ್ಪ ಸೋಮಪ್ಪ, ಲಕ್ಷ್ಮೀ, ಕೆ.ಅಯ್ಯಪ್ಪ, ಎನ್. ರೇಣುಕಮ್ಮ, ಹನುಮಂತಪ್ಪ, ಪದ್ಮಾವತಿ ಸೇರಿದಂತೆ ಮತ್ತಿತರರು ಹಾಜರಿದ್ದರು,
*****

Leave a Reply

Your email address will not be published. Required fields are marked *