ಬಳ್ಳಾರಿ: ಹಿರಿಯ ಶಿಕ್ಷಕ-ಶಿಕ್ಷಕಿಯರಿಗೆ ಸನ್ಮಾನ

ಬಳ್ಳಾರಿ: ಶಿಕ್ಷಕರ ದಿನಾಚರಣೆ ಅಂಗವಾಗಿ ನಗರದಲ್ಲಿ ಹಿರಿಯ ಶಿಕ್ಷಕ ಶಿಕ್ಷಕಿಯರನ್ನು ಬಳ್ಳಾರಿ ಬೆಳಗಾಯಿತು ದಿನ‌ಪತ್ರಿಕೆ ಸಹ ಸಂಪಾದಕ ವಿ.ಅನೂಪ್ ಕುಮಾರ್ ಅವರು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿ.ಅನೂಪ್ ಕುಮಾರ್ ಅವರು ವಿದ್ಯಾರ್ಥಿಗಳು ತಮ್ಮ ಉತ್ತಮ ಜೀವನ ರೂಪಿಸಿಕೊಳ್ಳುವಲ್ಲಿ ಶಿಕ್ಷಕರ ಪಾತ್ರ ಗಣನೀಯ ವಾಗಿದೆ ಎಂದರು.
ಹಿರಿಯ ಶಿಕ್ಷಕರಾದ ಈರಮ (35 ವರ್ಷ ಸೇವೆ) ಮೇರಿ ಕಥಾಸ್ (29ವರ್ಷ ಸೇವೆ), ಸೈಯದ್ ಶಬೀರ್ ಹುಸೇನ್ (28 ವರ್ಷಸೇವೆ) ಖೈರುನ್ ಬೀ (27 ವರ್ಷ) ಇವರ ಸೇವೆಯನ್ನು ಪರಿಗಣಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ರಾಮ ರಾಜು, ಮೋಹನ್, ಚಂದ್ರ ವೆಂಕಟೇಶ್‌, ಲೋಕೇಶ್, ವೀರೇಶ್‌ ಇದ್ದರು.
*****

Leave a Reply

Your email address will not be published. Required fields are marked *