ಜ. 28ರಂದು ಸರಳಾದೇವಿ ಕಾಲೇಜು ಹಳೇ ವಿದ್ಯಾರ್ಥಿಗಳ ಸಂಘದ ಉದ್ಘಾಟನೆ

ಬಳ್ಳಾರಿ, ಜ.6:  ಮೂರು ದಶಕಗಳ ಹಿಂದೆ ಆರಂಭವಾಗಿರುವ ನಗರದ ಸರಳಾದೇವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಳೆ ವಿದ್ಯಾರ್ಥಿಗಳ ಸಂಘ ಅಸ್ತಿತ್ವಕ್ಕೆ ಬಂದಿದೆ.  ಇದೇ ಜ.28 ರಂದು ಸಂಘದ ಉದ್ಘಾಟನಾ ಸಮಾರಂಭ ಜರುಗಲಿದೆ.

ಗುರುವಾರ ಸಂಜೆ ಕಾಲೇಜಿನಲ್ಲಿ ಸಂಘದ ಗೌರವ ಅಧ್ಯಕ್ಷರೂ ಆಗಿರುವ ಕಾಲೇಜಿನ ಪ್ರಾಂಶುಪಾಲ ಮಂಜುನಾಥ ರೆಡ್ಡಿ ಅವರ ಸಮ್ಮುಖದಲ್ಲಿ ಸಂಘದ ಸಭೆ ನಡೆಯಿತು.   ಮುಂದೆ ಕೈಗೊಳ್ಳಬೇಕಾದ ಹಲವು ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಸಂಘದ ಉದ್ಘಾಟನೆಯ ದಿನದಂದು ರಕ್ತದಾನ ಮತ್ತು ಸಸಿ ನೆಡುವ ಕಾರ್ಯಕೈಗೊಳ್ಳಲು ಸಭೆ ನಿರ್ಧರಿಸಿತು.

ಸಂಘದ ಸದಸ್ಯರಾಗಲು ಬಯಸುವ ಕಾಲೇಜಿನ ಹಳೇ ವಿದ್ಯಾರ್ಥಿಗಳು ಸಾಮಾನ್ಯ ಸದಸ್ಯತ್ವಕ್ಕೆ 100 ರೂ ಮತ್ತು ಆಜೀವ ಸದಸ್ಯತ್ವಕ್ಕೆ 500 ರೂ ನೀಡಿ  ಪಡೆಯಬಹುದಾಗಿದೆ.
ಸಂಘದಿಂದ ಕಾಲೇಜಿನ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಉಪನ್ಯಾಸ, ಕೌಶಲ್ಯ ಅಭಿವೃದ್ಧಿ, ಉತ್ತಮ ಸಾಧನೆ ಮಾಡುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದಾಯಕ ನೆರವು, ಮೊದಲಾದ ಚಟುವಟಿಕೆಗಳನ್ನು ಕೈಗೊಳ್ಳುವ ಬಗ್ಗೆಯೂ ಚರ್ಚಿಸಲಾಯಿತು.
ಸಭೆಯಲ್ಲಿ ಸಂಘದ ಅಧ್ಯಕ್ಷ ವೆಂಕಟೇಶ್ ಹೆಗಡೆ, ಖಜಾಂಚಿ ಎನ್, ವೀರಭದ್ರಗೌಡ, ಉಪಾಧ್ಯಕ್ಷರಾದ ಶೋಭಾ ಕಾಳಿಂಗ, ಕಿಶೋರ್ ಕುಮಾರ್, ಪದಾಧಿಕಾರಿಗಳಾದ ಆನಂದ್, ಅರುಣಾಚಲಂ, ಉಪನ್ಯಾಸಕರಾದ ಶೋಭಾ, ಜನಾರ್ಧನರೆಡ್ಡಿ, ಕೆ.ಗಂಗಾಧರ್, ಮಲ್ಲಾರೆಡ್ಡಿ, ಪ್ರಭಾಕರ್ ಜೋಯಿಸ್ ಮೊದಲಾದವರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *