ಹುನಗುಂದ: ಸಾಹಿತಿ ಡಾ.ನಾಗರತ್ನಾ ಭಾವಿಕಟ್ಟಿ ಅವರಿಗೆ ಕಸಾಪ ಹೂಗಾರ ದತ್ತಿ ಪ್ರಶಸ್ತಿ

ಹುನಗುಂದ, ಫೆ. ೧೨: ಪಟ್ಟಣದ ಸಾಹಿತಿ ಡಾ.ನಾಗರತ್ನಾ ಅಶೋಕ‌ ಭಾವಿಕಟ್ಟಿಯವರಿಗೆ ಬಾಗಲಕೋಟೆ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ನೀಡುವ ಕಲಾದಗಿ ಹೂಗಾರ ದತ್ತಿ ಪ್ರಶಸ್ತಿ ಲಭಿಸಿದೆ.
ಕಳೆದ ವರ್ಷ ಪ್ರಕಟಗೊಂಡ ಅಶೋಕ ಪ್ರಕಾಶನದ ‘ಜ್ಯೋತಿಮುಟ್ಟಿದ ಬತ್ತಿಜ್ಯೋತಿಯಾಯಿತು’ಕೃತಿಗೆ ಪ್ರಶಸ್ತಿ ದೊರೆತಿದೆ.
ಡಾ.ನಾಗರತ್ನಾ ಅವರು ಪಟ್ಟಣದ ವ್ಹಿ.ಮ.ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಉಪನ್ಯಾಸಕಿಯಾಗಿದ್ದಾರೆ,ಇದುವರೆಗೂ ಅವರ ನಾಲ್ಕು ಕೃತಿಗಳು ಪ್ರಕಟಗೊಂಡಿವೆ‌.


ಅಭಿನಂದನೆ: ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ನಾಗರತ್ನಾ ಭಾವಿಕಟ್ಟಿ ಅವರನ್ನು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ವಚನಸಾಹಿತ್ಯ ಪರಿಷತ್ತು, ಬಳ್ಳಾರಿಯ ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆ, ಸಂಸ್ಕೃತಿ ಪ್ರಕಾಶನ, ಅಶೋಕ ಪ್ರಕಾಶನ, ಹಗರಿಬೊಮ್ಮನಹಳ್ಳಿಯ ಅಪ್ಪ ಪ್ರಕಾಶನ, ಹುನಗುಂದದ ಹೊಸವೇ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.

*****

Leave a Reply

Your email address will not be published. Required fields are marked *