ಬಳ್ಳಾರಿ ನೂತನ ಜಿಲ್ಲಾಧಿಕಾರಿ ಪ್ರಶಾಂತಕುಮಾರ ಮಿಶ್ರ

ಬಳ್ಳಾರಿ, ಜು.24: ಬಳ್ಳಾರಿ ಜಿಲ್ಲಾ ನೂತನ ಜಿಲ್ಲಾಧಿಕಾರಿಯಾಗಿ ಪ್ರಶಾಂತಕುಮಾರ್ ಮಿಶ್ರ ಅವರು ಅಧಿಕಾರ ಸ್ವೀಕರಿಸಿದರು.
ನಿರ್ಗಮಿತ ಡಿಸಿ ಪವನ್ ಕುಮಾರ ಮಾಲಪಾಟಿ ಅವರು ಮಿಶ್ರ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
2014ನೇ ತಂಡದ ಐಎಎಸ್‌ ಅಧಿಕಾರಿ ಬಿಎ, ಎಲ್ ಎಲ್ ಬಿ ಪದವೀಧರರು. ಮೂಲತಃ ಬಿಹಾರ ರಾಜ್ಯದವರಾಗಿದ್ದು ರಾಯಚೂರಿನಲ್ಲಿ ಪ್ರೊಬೆಷನರಿ ಪೂರೈಸಿ ಬಳಿಕ ಹೊಸಪೇಟೆ ಉಪ ವಿಭಾಗಾಧಿಕಾರಿ ಕಾರ್ಯನಿರ್ವಹಿಸಿದ್ದು ಅವಿಭಜಿತ ಬಳ್ಳಾರಿ ಜಿಲ್ಲೆಯ ಪರಿಚಯವಿದೆ.
ಕೊಡಗು, ಮೈಸೂರು ಜಿಪಂ ಸಿಇಓ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಜಾಗೃತ ದಳದ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಅನುಭವವಿದ್ದರೂ ಮೊದಲ‌ಬಾರಿಗೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿಯಾಗಿ ಕರ್ತವ್ಯ‌ನಿರ್ವಹಿಸಲಿದ್ದಾರೆ.


ಮಾಲಪಾಟಿ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ಇಲಾಖೆಯ ಆಯುಕ್ತರಾಗಿ ಅಧಿಕಾರ ಸ್ವೀಕರಿಸುವರು.
—–

Leave a Reply

Your email address will not be published. Required fields are marked *