ಅನುದಿನ ಕವನ-೧೦೦೭, ಕವಿ: ಶಿಶಬ, ಹೊಸಪೇಟೆ, ಕವನದ ಶೀರ್ಷಿಕೆ:ಉಳಿದ ದಿನವೆಷ್ಟೋ ?

ಉಳಿದ ದಿನವೆಷ್ಟೋ ?

ಯಾರಿಗೊತ್ತು
ಉಳಿದ ದಿನವೆಷ್ಟು ?

ಉಂಡುಬಿಡು ಕೂಡಿಡಬೇಡ
ಕಾಲ ಮೇಲೆ ಕೈನೂರುವ ಮುನ್ನ
ನೋಡಿ ಬಿಡು ತಿರತಿರುಗಿ ಊರೂರ

ಉಳಿಕೆ ದಿನ ಅಂದಾಜಿಲ್ಲ
ಯಾವ ಸಂತನೂ ಹೇಳಿಲ್ಲ

ಬಸಣ್ಣ ಹೇಳಿದನೆಂದು ಸುಮ್ಮಿರಬೇಡ
ಇದಿರೆದುರೇ ಹಳಿದು ಹಳಾರಾಗು

ಜ್ಞಪ್ತಿ ಇದ್ದೀರಲೇಬೇಕು
ಮರುಪಾವತಿಸು ಅವನು ಕೇಳುವ ಮುನ್ನ
ಕೇಳಬೇಡ ಕೊಟ್ಟ ಸಾಲ
ನಿನಗಿಂತ ಕಷ್ಟದವರನ್ನು

ದೂರ ಹೋದವನ ಮರೆ
ಕಷ್ಟಕ್ಕಾದವನ ಕರೆ
ಕಕ್ಕುಲಾತಿ ತೋರು
ಹೃದಯ ಕಲ್ಲಾದವರ


-ಶಿಶಬ(ಶಿವಶಂಕರ ಬಣಗಾರ) ಹೊಸಪೇಟೆ

Leave a Reply

Your email address will not be published. Required fields are marked *