ಬಳ್ಳಾರಿ: ಭಾರತೀಯ ವೈದ್ಯಕೀಯ(ಐಎಂಎ) ಸಂಘದಿಂದ ಪತ್ರಿಕಾ ರಂಗದಲ್ಲಿ ಅತ್ಯುತ್ತಮ ಸೇವೆಗಾಗಿ ಕೊಡಮಾಡುವ ಅತ್ಯುತ್ತಮ ವರದಿಗಾರರ ಪ್ರಶಸ್ತಿಗೆ ಹೊಸದಿಗಂತ ಪತ್ರಿಕೆಯ ಬಳ್ಳಾರಿ ಜಿಲ್ಲಾ ವರದಿಗಾರರಾದ ವೆಂಕಟೇಶ ದೇಸಾಯಿ ಅವರು, ಭಾಜನರಾಗಿದ್ದು, ನಗರದ ಪಾರ್ವತಿ ನಗರ ಬಡಾವಣೆಯ ಬಸವ ಭವನದಲ್ಲಿ ವೈದ್ಯರ ದಿನಾಚರಣೆ -2026 ನಿಮಿತ್ತ ಭಾನುವಾರ ಸಂಜೆ ಆಯೋಜಿಸಿದ್ದ ಸಮಾರಂಭದಲ್ಲಿ ಪ್ರಶಸ್ತಿ ನೀಡಿ, ಗೌರವಿಸಲಾಯಿತು.

ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಬಳ್ಳಾರಿ ಶಾಖೆಯ ಅಧ್ಯಕ್ಷ ಡಾ.ಭರತ್ ವಿಜೆ, ಕುರುಗೋಡು ಕ್ಷೇತ್ರದ ಮಾಜಿ ಶಾಸಕ ನಾರಾ ಸೂರ್ಯನಾರಾಯಣ ರೆಡ್ಡಿ, ಉದ್ಯಮಿ, ಬುಡಾ ಮಾಜಿ ಅಧ್ಯಕ್ಷ ನಾರಾ ಪ್ರತಾಪ್ ರೆಡ್ಡಿ, ಡಾ. ಮಹಿಪಾಲ್, ಕರ್ನಾಟಕ ವೈದ್ಯಕೀಯ ಮಂಡಳಿ ಅಧ್ಯಕ್ಷ ಡಾ.ವೈ.ಸಿ.ಯೋಗಾನಂದ ರೆಡ್ಡಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ, ಡಾ. ಬಿ.ಕೆ. ಸುಂದರ್ ಸೇರಿದಂತೆ ಅನೇಕ ಗಣ್ಯರು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಬಿಎಂಆರ್ ಸಿ ಪ್ರಾಚಾರ್ಯ ಡಾ.ಮಲ್ಲಿಕಾರ್ಜುನ ಮೋರಿಗೇರಿ,
ಸಂಘದ ಉಪಾಧ್ಯಕ್ಷ ಡಾ.ಸಾದತ್ ಹುಸೇನ್, ಗೌರವ ಕಾರ್ಯದರ್ಶಿ ಡಾ.ಪಿ.ಹರೀಶ್, ಜಂಟಿ ಕಾರ್ಯದರ್ಶಿ ಡಾ.ಮೇದಿನಿ, ಖಜಾಂಚಿ ಡಾ.ರಾಕೇಶ್ ಕೆ.ಬಾಬು, ಮಹಿಳಾ ಘಟಕದ ಬಳ್ಳಾರಿ ಶಾಖೆಯ ಅಧ್ಯಕ್ಷೆ ಡಾ.ಸುಮಾ ಗುಡಿ, ಗೌರವ ಕಾರ್ಯದರ್ಶಿ ಡಾ.ಶೋಭಾ, ಖಜಾಂಚಿ ಡಾ.ಅನುರಾಧಾ ಸೋಮಶೇಖರ್ ಸೇರಿದಂತೆ ಸಂಘದ ಪದಾಧಿಕಾರಿಗಳು, ವಿವಿಧ ಗಣ್ಯರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ.ಜಿ.ವಿ.ರಾವ್, ಡಾ.ಶ್ರೀನಿವಾಸಲು ಪಿ., ಡಾ.ಭಾಗ್ಯಲಕ್ಷ್ಮೀ, ಡಾ.ಇಂದಿರಾ ರೆಡ್ಡಿ, ಡಾ.ಜೆ.ಶಂಕರ ಅವರನ್ನು ಸನ್ಮಾನಿಸಲಾಯಿತು.
ಅತ್ಯುತ್ತಮ ಆರೋಗ್ಯ ಸೇವೆಗಾಗಿ, ಗೋಪಿ ಬ್ಲಡ್ ಬ್ಯಾಂಕ್ ನ ಗೋಪಾಲ ರೆಡ್ಡಿ, ಸಮಾಜ ಸೇವಕ ಮಂಜು ಮೋದಿ ಅವರಿಗೆ ಸಮಾಜ ಸೇವೆ ಶ್ರೇಷ್ಠತಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎಂಬಿಬಿಎಸ್ ನಲ್ಲಿ ಅತ್ಯುತ್ತಮ ಸಮಗ್ರ ಸಾಧನೆ ಮಾಡಿದ ಡಾ.ಮುಸ್ಕಾನ್ ಅಗರವಾಲ್, ನೀಟ್ ಪರೀಕ್ಷೆಯಲ್ಲಿ ಟಾಪರ್ ಉನ್ನತ ಪದವೀಧರರಾದ ಕುಮಾರ್ ಶಶೀರ್, ಹೇಮಾದ್ರಿ ಕುಮಾರ್, ಅoಶುಮಾನ್ ಯೋಗಾನಂದ ರೆಡ್ಡಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದಕ್ಕೂ ಮುನ್ನ ಮುದ್ದು ಮಕ್ಕಳಿಂದ ಮನೋರಂಜನೆ ಕಾರ್ಯಕ್ರಮಗಳು ಗಮನಸೆಳೆದವು. ಡಾ.ಸುಮಾ ಹಾಗೂ ಡಾ. ದಿವ್ಯ ಅವರು ಕಾರ್ಯಕ್ರಮ ನಿರೂಪಿಸಿದರು. ಮಕ್ಕಳಿಂದ ಜರುಗಿದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.
