ಅನುದಿನ ಕವನ-೧೨೨೧, ಕವಿ: ಸಿದ್ದಲಿಂಗಪ್ಪ ಬೀಳಗಿ, ಹುನಗುಂದ, ಕಾವ್ಯ ಪ್ರಕಾರ: ಹಾಯ್ಕುಗಳು

ಹಾಯ್ಕುಗಳು


ನೂರು ಕತೆಗೆ
ಮುನ್ನುಡಿ; ಸಾವಿರದ
ಮುಗುಳು ನಗೆ

ಪ್ರೀತಿಯೌಷಧಿ
ಕುಡಿದ ದಿನವಿಡೀ
ಉಲ್ಲಾಸಮಯ

ಕಾದ ಕಾವಲಿ
ನೆಲ; ಬೆಂಕಿಯುಗುಳಿ
ದಣಿದ ಸೂರ್ಯ

ನಿದ್ರೆ ಇರದ
ಅದೆಷ್ಟೋ ರಾತ್ರಿ; ಬರೀ
ನಿನ್ನದೇ ಧ್ಯಾನ

ನೀಲಿ ಮುಗಿಲ
ತುಂಬ; ಬರೆದ ಚಿತ್ರ
ಹಕ್ಕಿಯ ಸಾಲು

ಅಂಕು ಡೊಂಕನು
ಮುಚ್ಚಲು; ಅಲಂಕಾರ
ವರಪ್ರಸಾದ

ಅವಳಿರದ
ದಿನವಿಡೀ; ಕಾಡುವ
ಒಳಬೇಗುದಿ

ಸರಸದಲಿ
ರಸವುಂಟು; ವಿರಸ
ಬೆಂಕಿಯ ಕಿಡಿ

-ಸಿದ್ದಲಿಂಗಪ್ಪ ಬೀಳಗಿ, ಹುನಗುಂದ