ದಡದಲ್ಲಿ ಮಲಗಿ
ಕನಸುಗಳ
ಪೋಣಿಸುವವರಿಗೆ ಕಾಣುವುದೇನು
ಕಡಲ ನಡುವಿನ
ಹೊಯ್ದಾಟದ
ಬದುಕು
ಹಡಗು ಮುಳುಗಿದ್ದ
ಕಂಡು ಅಂಜಬೇಡ
ದೋಣಿ ತೂತಾಗಿದೆಯೆಂದು ಕೊರಗಬೇಡ
ಅದರಲ್ಲೇ
ಪಯಣಿಸಬೇಕಿದೆ
ಬಹಳಷ್ಟು ದೂರ
ನಾನು ನೀನು
ಎಷ್ಟು ಕೂಡಿಟ್ಟರೂ
ಯಾವ ಗುರುತುಗಳೂ
ನಮಗಾಗಿ ಇಲ್ಲಿ ಉಳಿಯುವುದಿಲ್ಲ
-ವೈ ಜಿ ಅಶೋಕ ಕುಮಾರ್, ಬೆಂಗಳೂರು
—–