ಬಸವ ಜಯಂತಿ
ಕದ್ದು ಕೊಂದು ಹುಸಿಯ ನುಡಿದು
ಪರರ ಜರಿದು ನುರಿದು ನುಂಗಿ
ತನ್ನ ಬಣ್ಣಿಸಿ ಪರರ ಹಂಗಿಸಿ
ನಡೆ ನುಡಿಯ ಭಂಗಿಸಿ ಬಾಳಿದರೂ
ವರ್ಷಕ್ಕೊಮ್ಮೆ ಹರುಷದಿಂದ
ಪರುಷವಂದು ಕೊಂಡಾಡಿ
ಹೂವಿಡುವೆ ಪೊಡಮಡುವೆ!
-ಸವಿತಾ ನಾಗಭೂಷಣ, ಶಿವಮೊಗ್ಗ
—–
ಬಸವ ಜಯಂತಿ
ಕದ್ದು ಕೊಂದು ಹುಸಿಯ ನುಡಿದು
ಪರರ ಜರಿದು ನುರಿದು ನುಂಗಿ
ತನ್ನ ಬಣ್ಣಿಸಿ ಪರರ ಹಂಗಿಸಿ
ನಡೆ ನುಡಿಯ ಭಂಗಿಸಿ ಬಾಳಿದರೂ
ವರ್ಷಕ್ಕೊಮ್ಮೆ ಹರುಷದಿಂದ
ಪರುಷವಂದು ಕೊಂಡಾಡಿ
ಹೂವಿಡುವೆ ಪೊಡಮಡುವೆ!
-ಸವಿತಾ ನಾಗಭೂಷಣ, ಶಿವಮೊಗ್ಗ
—–