ಅನುದಿನ ಕವನ-೧೫೯೪, ಕವಯಿತ್ರಿ: ವೀಣಾ ಶ್ರೀನಿವಾಸ್, ಮಧುಗಿರಿ

ಅದೇಕೋ ಗೊತ್ತಿಲ್ಲ ,
ಬುದ್ದನ ಬಗ್ಗೆ ಒಂದು ಪ್ರಬುದ್ಧ ಪದ್ಯ
ಬರೆಯಲು ನನಗಿನ್ನೂ ಆಗುತ್ತಿಲ್ಲ…!
ಅವನಂತ ಭವ್ಯ ನಗು
ಎಲ್ಲೂ ಕಂಡಿಲ್ಲ…!

ಪ್ರತಿ ಭಾರಿ ಅವನನ್ನು
ಬೆರಗಿನಿಂದ ನೋಡುವೆ
ದ್ವಂದ್ವದ ಲೆಕ್ಕಾಚಾರದಲ್ಲಿ
ಅವನನ್ನು ಅಳೆಯುವೆ…!

ಆದರೆ ಅವನದೋ….
ಸದಾ ಅದೇ ಮುಖಭಾವ
ತಿಳಿನೀರಿನ ಕೊಳದಲಿ ಕಾಣುವಂತ ಜೀವ
ಅನುಸರಿಸಿ, ಹೇಳುವ ಶಾಂತಭಾವ
ನಗುತ್ತಲೆ ಬೆಳಕು ಹರಿಸಿದ
ಅನಂತ ಚೈತನ್ಯ!!

-ವೀಣಾ ಶ್ರೀನಿವಾಸ್, ಮಧುಗಿರಿ