ಕವಿತೆಗಳು ಸಾವನ್ನುಪ್ಪುವುದಿಲ್ಲ…
ಉರಿದು ಬಿದ್ದ ಉಲ್ಕೆಗಳು
ಮತ್ತೆ ಉರಿಯುವಂತೆ
ಈ ಕವಿತೆಗಳು ಉರಿಯುತ್ತವೆ…
ಈ ಕವಿತೆಗಳು ಸಾವನ್ನಪ್ಪುವುದಿಲ್ಲ
ಸೂರ್ಯನಂತೆ ಸದಾ ಸಂಚರಿಸುತ್ತ
ಒಂದೆಡೆ ಕತ್ತಲಾದರೆ
ಮತ್ತೊಂದು ಕಡೆ ಬೆಳಕಾಗುತ್ತವೆ…
ಕವಿತೆಗಳು ಸಂಭ್ರಮಕ್ಕೆ
ಋಷಿ ನೀಡುವ ಬಣ್ಣಗಳಂತೆ
ದುಃಖಕ್ಕೋ ಸಂತೈಸುವ ಸರಕುಗಳು
ಓದಿದಷ್ಟು ಹೃದಯ ಮುಟ್ಟುತ್ತವೆ
ಹೃದಯ ಹೃದಯಗಳ ನಡುವೆ ಸೇತು ಆಗುತ್ತವೆ…
ಕವಿತೆಗಳು ಹೂವಿನಂತೆ
ದುಂಬಿಯಂತೆ ಕೊಳಲಿನಂತೆ
ಋತುವಿನಂತೆ ಮಳೆಯಂತೆ ಹನಿಯಂತೆ
ಸದಾ ಜೀವಂತ ಹೊತ್ತ ಮಣ್ಣಿನ ವಾಸನೆಯಂತೆ
ಸದಾ ಪರಿಮಳನೀಯುತ್ತಲೇ ಇರುತ್ತವೆ
ನೀವು ಓದಿಬೇಕಷ್ಠೆ…
-ಸಿದ್ದು ಜನ್ನೂರ್, ಚಾಮರಾಜನಗರ