ಅತಂತ್ರ ಅವಸ್ಥೆ
ನೆಲಕ್ಕುರುಳಿ ರೋಧಿಸಿದೆ
ಹಲವಾರು ತಾಳಿ ಕುಂಕುಮ ದ
ಆರಾಟ
ಈ ಅನ್ಯಾಯಕೆ ರಕ್ತ ಸಿಕ್ತ
ರಾಕ್ಷಸರ ಕುಡುಗೋಲು ಸುತ್ತಿಗೆಯ ಕೆಂಪು ಸಲಾಮು
ವ್ಯವಸ್ಥೆಯ ವ್ಯಂಗ್ಯ ನಗೆಗೆ
ಕುಣಿಯುತಿವೆ…
ಪರ್ಯಾಟನೆಯ ಕೆಲವು ಮುಗ್ಧತೆಯ ಮರಗಳು
ಈ ಸಂಕೋಲೆಗೆ ಹೆದರಿ
ವಂಚಿತ ಸೌಲಭ್ಯದಿ ಬೆವರಿ
ಮಣ್ಣ ಸಮರಕೆ ಸಜ್ಜಾಗಿವೆ
ಆದರೂ ಸಂಘಟನೆ ಒಗ್ಗಟ್ಟು
ಮರೀಚಿಕೆಯ ಬೆಂಕಿಯಲಿ
ದೇಹಗಳು ಸುಟ್ಟು ಕರುಕುಲಾಗಿವೆ…
ವೋಟಿನ ಭರಾಟೆಗೆ ಸತ್ತ ಶವದ
ಮೆರವಣಿಗೆ
ಇದಕೆ ಮೇಲೆ ಹಾಕಿದ ಹೂವ ಕೂಡ ಕಣ್ಣ ಬಿಂದು ತೆಗೆದಿದೆ.
ಹತ್ತಿದೆ ಕಾಡಗಿಚ್ಚು ಎಚ್ಚರಿಕೆಯ ಸಂಕೇತ ಸೂಚಿಸಿದರೂ ಕುರ್ಚಿಯ ರಾಜಕೀಯ ಅಸ್ತ್ರ ಆಟವಾಡಿ
ನ್ಯಾಯವ ಮಣ್ಣ ಕತ್ತಲೆಯಲಿ
ಹೂಳುತಿದೆ…
ಬೆಳಕ ದಾರಿಗೆ ಕತ್ತಲ ಅದ್ರಶ್ಯ
ಇದಕೆ ಯಾವ ಹಾದಿಯು ಇಲ್ಲ
ವಾದ ವಿವಾದ ಹೆಣಿಕೆಗೆ ಮಾಧ್ಯಮ ಚಕ್ರ ಸತ್ಯದ ಸ್ವತ್ತನ್ನ
ಏರು ಪೇರು ಮಾಡಿ ತಿರುಚುತ್ತಿದೆ…
ಭರತ ರಾಷ್ಟ್ರದ ತಿರಂಗದ
ಬಾವುಟ ಶಸ್ತ್ರಗಳ ಬಿಸಿ ಉಸಿರಿಗೆ ಹಾರಾಡುತಿದೆ..
ಆದರೂ ಮುಕ್ತಿ ಸಿಗದ ಬಸ್ತಾರ ಬಡ ಗುಡಿಸಲ
ಒಣ ಒಗಡು ಆಕ್ರಂದನದಿ
ಸುಡುತ್ತಿದೆ…
ವಿಚಿತ್ರ ಅಲ್ಲವೇ ರಾಷ್ಟ್ರ ಪ್ರಭುತ್ವದ ಅವಸ್ಥೆ.,
ಬಂದೂಕ ಬುಲೆಟ್ಟು
ವ್ಯಥೆ ಪಡುತ್ತಿದೆ…
ಕೊನೆಗೂ ಗಾಳಕ್ಕೆ
ಸಿಕ್ಕ ಹಿಂಸೆಯ ವಶ
ಬಸದಿಯ ಹೊಸ್ತಿಲಲಿ ಲಾಲ್ಟೀನು
ಸಂತೋಷದಿ ಕಾಂತಿಯ ಬೀರುತಿದೆ…
ಸ್ವಾಸ್ತ್ಯ ದ ಜಗದೀ
ಕಾಡುಮೇಡು ಗಳು
ಇನ್ನೂ ಅತಂತ್ರದ ಬಾಳನು
ಅನುಭವಿಸಿ ಕುಗ್ಗುತ್ತಿವೆ ಯಲ್ಲವೇ…
ಪ್ರಶ್ನೆಯ ಹನಿಯಳು
ಉತ್ತರ ಕಟುಕಟೆಯ ಕೋಲು ಸುತ್ತಿಗೆಯಲಿ ಒದ್ದಾಡುತ್ತಿದೆ…
-ಡಾ. ಕೃಷ್ಣವೇಣಿ ಆರ್ ಗೌಡ, ಹೊಸಪೇಟೆ