ಅವಳ ನಗು
ಖಾಲಿ ಹಾಳೆಯ ಮೇಲಿನ
ಒಂದು ಪುಟ್ಟ ಕವಿತೆ…
ಸರಾಗವಾಗಿ ದಕ್ಕುವ
ಸೂರ್ಯಕಾಂತಿಯ ಕಲರವ
ಒಂಟಿ ನೆಲದ ಮೇಲನ ಕೇದಿಗೆ
ಕಾಡಿಗೆ ಘಮ್ಮೆಂದು ಕಂಪಸೂಸಿ
ಜೋಕಾಲಿ ತೂಗಿದಂತೆ ತೂಗಿ
ಆಕಾಶಕ್ಕೆ ಬಣ್ಣ ಬಳಿದಂತೆ…
ಮಳೆ ಬಿದ್ದು ಮಣ್ಣು
ಊರಿಗೆಲ್ಲ ಹರಡಿ ಸುಗಂಧ ಸೂಸಿ
ತನ್ನ ತಾನು ಹದವಾಗಿಸಿಕೊಂಡು
ಭೂಮಿಗೆ ಬಿದ್ದ ಬೀಜದ ನಡುವೆ
ಚಿಗುರೊಡೆದು ನಕ್ಕ ವಸಂತದ ಹಾಗೆ…
-ಸಿದ್ದು ಜನ್ನೂರ್, ಚಾಮರಾಜನಗರ
—–