ಕಂಪ್ಲಿ, ಜು.11: ಕರ್ನಾಟಕ ಬೌದ್ಧ ಸಮಾಜ ಆಯೋಜಿಸುತ್ತಿರುವ
“ಪ್ರತೀ ಹುಣ್ಣಿಮೆ ಬುದ್ಧ ಪೂರ್ಣಿಮೆ” ಕಾರ್ಯಕ್ರಮವನ್ನು
ಕಂಪ್ಲಿ ಯಲ್ಲಿ ಅರ್ಥಪೂರ್ಣ ಗುರುಪೂರ್ಣಿಮೆ ಯಾಗಿ ಆಚರಿಸಲಾಯಿತು.
ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಮಾಜಿ ಸದಸ್ಯರು
ಶಿಕ್ಷಣ ತಜ್ಞರು, ಜೀವಪರ ಚಿಂತಕರೂ
ಡಾ.ಹೆಚ್.ಸಿ.ರಾಘವೇಂದ್ರ ಸರ್ ಅವರ ಮನೆಯಲ್ಲಿ ಕಾರ್ಯಕ್ರಮ ಜರುಗಿತು.
ತ್ರಿಸರಣ ಪಂಚಶೀಲಗಳ ಪಠಣದೊಂದಿಗೆ
ಬುದ್ಧ ವಂದನೆಯನ್ನು ಸಲ್ಲಿಸಿ ನಂತರ ವೈಚಾರಿಕ ಚಿಂತನೆಗಳ ಚರ್ಚೆ ಗಮನಸೆಳೆಯಿತು.
ಅಂತಿಮವಾಗಿ ಈ ದೇಶದ ಹಿಂದುಳಿದ ವರ್ಗಗಳ ರಕ್ಷಣೆಗಾಗಿ ಸಂವಿಧಾನವನ್ನು ಉಳಿಸಿಕೊಳ್ಳುವ ಜವಾಬ್ದಾರಿ ಕುರಿತು ವಿಚಾರ ವಿನಿಮಯಗಳು ನಡೆದವು.
ಎಲ್ಲಾ ಜಾತಿ ಸಮುದಾಯದ ಬಂಧುಗಳು ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಬುದ್ಧ ಪೂರ್ಣಿಮೆಯನ್ನು ಗುರುಪೂರ್ಣಿಮೆಯಾಗಿ ಆಚರಿಸಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮದಲ್ಲಿ ಕರ್ನಾಟಕ ಬೌದ್ಧ ಸಮಾಜದ ಗೌರವಾಧ್ಯಕ್ಷರು ಚನ್ನಬಸಪ್ಪ, ಅಧ್ಯಕ್ಷ ರಮೇಶ ಸುಗ್ನಳ್ಳಿ, ಉಪಾಧ್ಯಕ್ಷರಾದ ಅಂಜಿನಪ್ಪ, ಶಿಕ್ಷಕರಾದ ಬಸವರಾಜ, ಟಿ.ಶಿವರಾಜ್,
ಪಿ ಸಿ ಉಮೇಶ್ ಅವರು, ಪೊಲೀಸ ಇಲಾಖೆಯ ಶಿವರಾಜ್ ಅವರು ಇಂಜಿನಿಯರ್ ಶಾರುಖ್ ಅವರು,
ಭರತ್ ಅವರು, ಕರ್ನಾಟಕ ಬೌದ್ಧ ಸಮಾಜದ ಮಂಜುನಾಥ್, ಹರ್ಷವರ್ಧನ್, ಸುಧಾಕರ್, ರಮೇಶ್, ಹಾಗೂ ಇನ್ನಿತರ ಸ್ನೇಹಿತರು ಬಂಧುಗಳು ಮತ್ತು
ಡಾ.ರಾಘವೇಂದ್ರ ಸರ್ ಅವರ ಶ್ರೀಮತಿ ಸುಮಾ ಮೇಡಂ ಹಾಗೂ ಅವರ ಮಗಳು ಶ್ರೀಧೃತಿ ಪಾಲ್ಗೊಂಡಿದ್ದರು.