ಐಬಿದೆ !?
ರೆಕ್ಕೆ ಪುಕ್ಕ ಕೊಂಬು ಕೋಡು
ಅಲಂಕಾರವಲ್ಲ ಅಗತ್ಯ ಅಷ್ಟೇ
ಕೂದಲ ಬಾಲ ಚಿಪ್ಪು ಚೀಲ
ಅಲಂಕಾರವಲ್ಲ ಅಗತ್ಯ ಅಷ್ಟೇ
ಕಣ್ಣು ಬಣ್ಣ ಬೆಡಗು ಬಿಂಕ
ಅಲಂಕಾರವಲ್ಲ ಅಗತ್ಯ ಅಷ್ಟೇ
ಸಕಲ ಜೀವ ಸಂಕುಲಗಳು
ಸಹಜವಾಗಿ ಬದುಕಿವೆ
ಅಡಿಯಿಂದ ಮುಡಿತನಕ
ಸಿಂಗಾರ ಬಂಗಾರ!
ಮಿತಿಮೀರಿ ಅಲಂಕಾರ
ಮನುಜನಲ್ಲಿ ಏನೋ ಐಬಿದೆ!
– ಸವಿತಾ ನಾಗಭೂಷಣ, ಶಿವಮೊಗ್ಗ