ಬುದ್ಧ…
ಈಗಾ ಎಲ್ಲರ ಮನೆಗೆ ನೀನು
ಧಾರಾಳವಾಗಿ ಬಂದು ಕೂರುತ್ತಿರುವೆ
ಪ್ರಶಾಂತವಾಗಿ ಎಲ್ಲ ಧ್ಯಾನಿಸುವುದ ಕಲಿತಿದ್ದಾರೆ…
ನಾಕು ಗೋಡೆಯ ನಡುವಿದ್ದ ಎಂತದ್ದೊ ಕನಸು ಈಗಾ
ನಯ ನಾಜೋಕಾಗಿ ನಕುಕಿಂದ ನಸುಕಿಗೆ ಮೇಳೈಸುತ್ತು ಹುಣ್ಣಿಮೆಗೆ ಕನ್ನಡಿ ಹಿಡಿದು ಜನ
ಮನೆ ಶುದ್ಧ ಮಾಡಿ ನಿನ್ನ ದಾರಿಗೆ ಅಂಬೆಗಾಲಿಟ್ಟಿದ್ದಾರೆ…
ಬೆಳಕಿನ ಮೇಳದಲ್ಲಿ ನಿನ್ನದೆ ಒಂದು ತೂಕ
ಸದಾ ಜಾತ್ರೆಯಲ್ಲಿ ಜಿಗಿಗುಡುವ ಜನ
ಈಗಾ ನಿನ್ನತ್ತ ದಾಪುಗಾಲಕಿ ಊರುಕೇರಿಗೆ ಅಂಟಿದ್ದ
ಶಾಪದ ಎಲ್ಲ ಕೊಳೆಗಳ ತೊಳೆದು
ನಿನ್ನ ಧ್ಯಾನಕ್ಕೆ ಬಿದ್ದಿದ್ದಾರೆ…
ನಗುವ ಶಿಶು ಮಕ್ಕಳಿಗೆ ನಿನ್ನದೆ ಹೆಸರಿನ ಬೊಟ್ಟನಿಟ್ಟು
ಹೃದಯ ಶಬ್ಧದಿಂದ ನಿನ್ನ ನಾದ ಹೊಮ್ಮಿಸಿ
ಬದಲಾವಣೆಗೆಂದೆ ಹಳೆಯದ್ದನ್ನೆಲ್ಲ ದಿಕ್ಕರಿಸಿ
ಹೊಸತನದ ನಿನ್ನಾ, ಅಂತಃಕರಣದಿಂದ ಗ್ರಹಿಸಿದ್ದಾರೆ…
ನಿನ್ನದೆ ಭಾವಚಿತ್ರಗಳೀಗ ಮನೆ ಗೋಡೆಗೆ
ನೇತು ಬೀಳುತ್ತಿವೆ
ನಗುವ ಬುದ್ಧನೋ
ಧ್ಯಾನಿಸುವ ಬುದ್ಧನೋ
ಅಂತೂ ನೀನೀಗ ಎಲ್ಲರ ಮನೆಗೆ ಬೇಕಾಗಿರುವೆ…
-ಸಿದ್ದು ಜನ್ನೂರ್, ಚಾಮರಾಜನಗರ
—–