ಅನುದಿನ ಕವನ-೧೬೮೦, ಕವಿ: ಎಚ್ ಆರ್ ಕೃಷ್ಣಮೂರ್ತಿ, ಶಿವಮೊಗ್ಗ, ಕವನದ ಶೀರ್ಷಿಕೆ: ನೀನೆಂದರೆ…….

ನೀನೆಂದರೆ…….

ನೀನೆಂದರೆ ನನಗೆ
ಇಷ್ಟವಾಗುವುದೇಕೆ ?
ನಿನ್ನ ಮಾತು ಕೇಳಿದರೆ
ಮನಕೆ ಹಿತವಾಗುವುದೇಕೆ?

ನಿನ್ನ ನೋಡಲು
ಮನಸು ಹಾತೊರಿಯುವುದೇಕೆ..?
ನೀ ನನ್ನ ಜೊತೆಯಿದ್ದರೆ
ಸಮಯ ಸರಿದಿದ್ದೆ ಗೊತ್ತಾಗದೇಕೆ?.

ನೀ ಹಗಲಿರುಳು ನನಗೆ
ನೆನಪಾಗುವುದೇಕೆ?…..
ನಿನಗೆ ನೋವಾದರೆ
ನನಗೂ ನೋವಾಗುವುದೇಕೆ?

ನಿನ್ನ ಯೋಚನೆಗಳು
ನನ್ನ ಆಲೋಚನೆಗಳ
ತದ್ರೂಪವೇಕೆ?….
ನಿನ್ನ ಸ್ಪರ್ಶದಿ
ಎದೆಯಲಿ ಮಿಂಚು
ಸರಿಯುವುದೇಕೆ.?

ನಿನ್ನ ಬಗ್ಗೆ ನನಗೆ
ಒಳಗೊಳಗೆ ಅಭಿಮಾನವೇಕೆ?.
… ಕಣ್ಣ ಬಿಂಬದಿ
ನನ್ನ ನಾ ನೊಡಿದರೂ
`ನೀನೇ ಕಾಣುವುದೇಕೆ?

ಹೀಗಿದ್ದಾಗ ಇನ್ನೂ
ನನ್ನ ಪ್ರೀತಿಯ ಬಗ್ಗೆ
ಅನುಮಾನವೇಕೆ?
ನಾನಿನ್ನ ಪ್ರೀತಿ ಸುತ್ತಿರುವೆನೆಂದು
ಬಾಯ್ಬಿಟ್ಟು ಹೇಳಬೇಕೆ?

-ಎಚ್ ಆರ್ ಕೃಷ್ಣಮೂರ್ತಿ, ಶಿವಮೊಗ್ಗ