ಚಿತ್ರದುರ್ಗ, ಸೆ.3: ಜಿಲ್ಲೆಯ ಚಳ್ಳಕೆರೆ ತಾಲೂಕಿನ ಸೂಫಿ ಸಂತರ ಭಾವೈಕ್ಯತೆಯ ನಾಡು ನಾಯಕನಹಟ್ಟಿ ಗ್ರಾಮದ ಬಿಳೆಕಲ್ಲು ಗೆಳೆಯರ ಬಳಗದ ವತಿಯಿಂದ 33ನೇ ವರ್ಷದ ಶಕ್ತಿ ಗಣಪತಿ ಮಹೋತ್ಸವ ಭವ್ಯವಾಗಿ ಜರುಗಿತು. ಈ ಸಂಭ್ರಮದಲ್ಲಿ ಬಳ್ಳಾರಿಯ ಹಂದ್ಯಾಳ್ ಶ್ರೀ ಮಹಾದೇವ ತಾತ ಕಲಾ ಸಂಘದ ಕಲಾವಿದರು ಪ್ರದರ್ಶಿಸಿದ ಕೀರ್ತಿಶೇಷ ಶಂಕರ ನಾಯ್ಡು ಅವರ ಕೃತಿ ‘ದನ ಕಾಯುವರ ದೊಡ್ಡಟ’ ಹಾಸ್ಯ ನಾಟಕ ನೆರೆದಿದ್ದ ನೂರಾರು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿತು.
ಅಕ್ಷರಜ್ಞಾನದ ಮಹತ್ವವನ್ನು ಮನರಂಜನಾತ್ಮಕ ರೀತಿಯಲ್ಲಿ ತಲುಪಿಸಿದ ಈ ನಾಟಕ, ಸಾಕ್ಷರತಾ ಸಂದೇಶವನ್ನು ಜನಮನದಲ್ಲಿ ಬಿತ್ತುವಲ್ಲಿಯೂ ಯಶ ಕಂಡಿತು.
ಪಾತ್ರ ನಿರ್ವಹಣೆ: ಸಾರಥಿಯಾಗಿ ಹಿರಿಯ ರಂಕಲಾವಿದ ಪುರುಷೋತ್ತಮ ಹಂದ್ಯಾಳು, ಗಣಪತಿಯಾಗಿ ದಾನಯ್ಯಸ್ವಾಮಿ, ದುರ್ಯೋಧನನಾಗಿ ಅಂಬರೀಶ್ ಹಚ್ಚೊಳ್ಳಿ, ದುಶ್ಯಾಸನನಾಗಿ ಪಾರ್ವತೀಶ ಗೆಣಿಕೆಹಾಳ್, ದ್ರೌಪದಿ ಮತ್ತು ನೃತ್ಯಗಾರ್ತಿಯಾಗಿ ಮೌನೇಶ್ ಕಲ್ಲಳ್ಳಿ, ನಕುಲ-ಸಹದೇವರಾಗಿ ಗುರು ಮೋಕ ಮತ್ತು ಲಿಂಗಪ್ಪ ಹಂದ್ಯಾಳು, ಕೃಷ್ಣನಾಗಿ ಕುಮಾರಗೌಡ ಅಮರಪುರ, ಕಥಾಸಂಚಾಲಕರಾಗಿ ಸುಂಕಣ್ಣ ಹೊಸಯರಗುಡಿ .
ರುದ್ರಮುನಿ ಸ್ವಾಮಿ ಪ್ರೇಕ್ಷಕರನ್ನು ರಂಜಿಸಿದರು.
🎶 ಸಂಗೀತ ಸಾಥ್: ಎರ್ರಿಸ್ವಾಮಿ ಆಚಾರ್ ಅವರು ಹಾರ್ಮೋನಿಯಂನಲ್ಲಿ, ಗಾದಿಲಿಂಗಪ್ಪ ಅಮರಾಪುರ ತಬಲಾದಲ್ಲಿ ಕಲಾವಿದರಿಗೆ ಸಂಗೀತಸಾಥ್ ನೀಡಿದರು.
ಜನಸಂದಣಿಯಲ್ಲಿ ನಡೆದ ಈ ನಾಟಕವು ಮನರಂಜನೆ ಮತ್ತು ಸಂದೇಶ ಎರಡನ್ನೂ ಒಟ್ಟಿಗೆ ನೀಡುವಲ್ಲಿ ಯಶಸ್ವಿಯಾಯಿತು.