ಅನುದಿನ ಕವನ-೧೭೦೯, ಹಿರಿಯ ಕವಿ: ಮಹಿಮ, ಬಳ್ಳಾರಿ

ಸಾಗೋಣ
ಸಾಗಿ ಬಿಡೋಣ
ಬೇಗ ಬಾ
ದೂರ ದೂರಕೆ,
ಯಾರೂ ಇಲ್ಲದ ತಾಣದಲ್ಲಿ ನಾವಿಬ್ಬರೇ ಇದ್ದುಬಿಡೋಣ,
ಮಾತುಗಳು ಬೇಡವೇ ಬೇಡ
ಕಂಗಳಿಂದಲೇ ಮಾತನಾಡಿಬಿಡೋಣ,
ಬಯಕೆಗಳ ಬದಿಗಿಟ್ಟು
ಸೌಂದರ್ಯವ ಆಸ್ವಾದಿಸೋಣ..
ಗಾಳಿಯಲ್ಲಿ ಹಾಸುಹೊಕ್ಕಾಗಿ ಬರುವ ಸುಪ್ತ ಸಂದೇಶಗಳ ಆಲಿಸೋಣ..
ನೇಸರನ ಕಿರಣಗಳ ಸವಿಯೋಣ..
ಬೆಳದಿಂಗಳನ್ನೇ ಸೇವಿಸಿ ಮೈಮರೆಯೋಣ‌‌…
ಕಡಲ ಅಲೆಗಳ ಮಾತುಗಳ ಕೇಳಿಸಿಕೊಳ್ಳೋಣ..
ಜಗದ ಜನರ ಮಾತುಗಳಿಗೆ ಕಿವುಡಾಗಿಬಿಡೋಣ..
ನಾಳಿನದನ್ನು ನಿನ್ನೆಯದನ್ನು ಮರೆತುಬಿಡೋಣ..
ಮಾತುಗಳನ್ನು ಮೌನವಾಗಿಸಿಬಿಡೋಣ..
ಬಾ ಬೇಗ
ದೂರ ದೂರ ಸಾಗಿಬಿಡೋಣ

-ಮಹಿಮ, ಬಳ್ಳಾರಿ