ಕವಿ ಎನ್ನುವರು..!
ನಾನು ಬರೆಯುತ್ತೇನೆ
ಅಲೆಗಳು ಗಾಳಿಗು
ಬೆಂಕಿಯ ಜ್ವಾಲೆಗು
ಬರೆಯುತ್ತೇನೆ.
ಕವನ ಕವಿತೆಯೊ
ಕನಸುಗಳ ಕೂಡಿ ಹಾಕಿ
ಭಾವನೆಗಳ ಶಬ್ದಗಳ ಸೇರಿಸಿ
ಓದುವವರು ಕೇಳುವವರು
ಇಲ್ಲದಿದ್ದರೂ ನನ್ನಷ್ಟಕ್ಕೆ
ಬರೆಯುತ್ತೇನೆ.
ಬಾಷಾಜ್ಞಾನ ಕಡಲೆಯಷ್ಟು
ಖಾಲಿ ಬುರುಡೆಯಲಿ
ವ್ಯಾಕರಣ ಸಾಹಿತ್ಯ
ಗೊತ್ತಿಲ್ಲದಿದ್ದರು
ಓದಿದ್ದನ್ನು ಕೇಳಿದ್ದನ್ನು
ನನ್ನದೇ ಬಾಷೆಯಲಿ
ಬರೆಯುತ್ತೇನೆ
ಕವಿ ಎನ್ನುವರು
ಓದಿದವರು ಹೊಗಳುವರು
ತೆಗಳುವವರು ಚಿಂತೆ ಇಲ್ಲ
ಸ್ವತಃ ಬೆಳಕಿಲ್ಲದ
ಇರುಳ ಚಂದ್ರನಂತೆ ನಾನು
ಸತ್ಯ… ನಾ ಕವಿ
ಕವಿ ಅಂತು ಅಲ್ಲವೇ ಅಲ್ಲ.?
✍️…ನಿಮ್ಮವನೆ..ರಾಜ್❣️(ಮುನಿರಾಜ್, ಬೆಂಗಳೂರು)