ಅನುದಿನ‌ ಕವನ-೧೭೨೧, ಕವಿ: ತರುಣ್ ಎಂ ಆಂತರ್ಯ✍️, ಟಿ.‌ನಾಗೇನಹಳ್ಳಿ, ಚಿತ್ರದುರ್ಗ, ಕವನದ ಶೀರ್ಷಿಕೆ: ಬದುಕು ಬವಣೆ

ಬದುಕು ಬವಣೆ

ಹಸಿವು ಆರ್ತನಾದದಿ
ಅಬ್ಬರಿಸುತ್ತ
ಉಸಿರು ಸದ್ದಿಲ್ಲದೆ
ಬಿಕ್ಕಳಿಸುವಾಗ

ಬೆವರ ಬಸಿದು ದೇಹವು
ಕಂಬನಿಯೊಂದಿಗೆ ಸೇರಿ
ಬೊಗಸೆ ತುಂಬಿದಾಗ

ಹಗಲು ಇರುಳುಗಳಲಿ
ಅರಿವಿರದೆ
ಮುಗ್ಧತೆಯು ಬೀದಿಯಲಿ
ಬದುಕು ಹೊತ್ತು ತಿರುಗುವಾಗ

ಅಜ್ಞಾನದ ಅಂಧಕಾರವು ಸುತ್ತಲು ಕವಿದು
ದಾರಿಕಾಣದಾಗ
ಯಾವ ಕಡೆಯಿಂದಲು
ಬೆಳಕು ಹರಿದು ಬಾರದಿರುವಾಗ

ಆಸೆ ಕನಸುಗಳ ಹಂಬಲವ ತೊರೆದು
ಕಷ್ಟ ನೋವುಗಳು
ಮುಖದಲ್ಲಿ ಕಂಗೊಳಿಸುವಾಗ
ಅಸಾಯಕನಾಗಿ ಒಮ್ಮೆ ಬೇಸತ್ತು ನಕ್ಕಾಗ

ದೇವರ ಹೇಗೆ ತಾನೇ ಪ್ರೀತಿಸಲಿ
ಹೋರಡುತ್ತಿರುವೆ ನಾ ಇನ್ನು ಬದುಕಿನಲಿ ….


-ತರುಣ್ ಎಂ ಆಂತರ್ಯ✍️, ಟಿ. ನಾಗೇನಹಳ್ಳಿ, ಚಿತ್ರದುರ್ಗ