ಶಿಲ್ಲಾಂಗ್(ಮೇಘಾಲಯ) : ಬಳ್ಳಾರಿ ಮೂಲದ ತೆಲುಗು ಮಾಸ ಪತ್ರಿಕೆ ಪ್ರಜಾಡೈರಿಯು ದಕ್ಷಿಣ ಭಾರತದ ಅತ್ಯಂತ ವಿಶ್ವಾಸಾರ್ಹ ಮಾಸಪತ್ರಿಕೆಯಾಗಿ ಓದುಗರ ಮನಗೆದ್ದಿದೆ. 25 ವರ್ಷಗಳನ್ನು ಯಶಸ್ವಿಯಾಗಿ ಪೊರೈಸಿದ ಹಿನ್ನಲೆಯಲ್ಲಿ ಪ್ರಜಾಡೈರಿ ಪತ್ರಿಕೆಯ ಬೆಳ್ಳಿ ಹಬ್ಬ ಆಚರಣೆ ಮತ್ತು ಸೆಲೆಬ್ರೆಟಿಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಮೇಘಾಲಯದ ರಾಜ ಭವನದಲ್ಲಿ ಬುಧವಾರ ಅದ್ಧೂರಿಯಾಗಿ ನಡೆಯಿತು.
ಇದೇ ವೇಳೆ ಪ್ರಜಾಡೈರಿಯ 25ನೇ ವರ್ಷದ ಲಾಂಛನವನ್ನು ಮೇಘಾಲಯದ ರಾಜ್ಯಪಾಲರಾದ ಸಿ.ಎಚ್. ವಿಜಯಶಂಕರ್ ಅವರು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಪಾಲರಾದ ಸಿ.ಎಚ್. ವಿಜಯಶಂಕರ್ ಅವರು, ಪ್ರಜಾಡೈರಿ ಉತ್ತಮ ಮಾಸ ಪತ್ರಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚು ಯಶಸ್ಸು ಕಾಣಲಿ ಎಂದು ಶುಭ ಹಾರೈಸಿದರು.
ನಂತರ ರಾಜ್ಯಪಾಲರು ನಟ ಕಿರೀಟಿ ಡಾ. ರಾಜೇಂದ್ರ ಪ್ರಸಾದ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಸನ್ಮಾನಿಸಿದರು. ಜೊತೆಗೆ ವಿವಿಧ ಗಣ್ಯರಿಗೆ ಸೆಲಿಬ್ರಿಟಿ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ರಾಜೇಂದ್ರ ಪ್ರಸಾದ್ ಅವರು, ನಾನು ರಾಜ್ಯಪಾಲರಿಂದ ಪ್ರಶಸ್ತಿ ಸ್ವೀಕರಿಸಿದ್ದೇನೆ. ಇದು ನನಗೆ ಬಹಳ ಸಂತೋಷ ವಿಷಯ ಪ್ರಜಾಡೈರಿ ಮಾಸ ಪತ್ರಿಕೆ ಇನ್ನೂ ಹೆಚ್ಚು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.
ಬಳ್ಳಾರಿ ಬೆಳಗಾಯಿತು ದಿನ ಪತ್ರಿಕೆಯ ಸಹ ಸಂಪಾದಕರಾದ ವಿ. ಅನೂಪ್ ಕುಮಾರ್ ಅವರು ಮಾತನಾಡಿ, ಪ್ರಜಾಡೈರಿ ಎಂಬ ಪತ್ರಿಕೆ ಬಳ್ಳಾರಿಯ ಮೂಲದ ಪತ್ರಿಕೆಯಾಗಿದ್ದು, ತನ್ನ ಬೆಳವಣಿಗೆಯ ದಾರಿ ಸುಗಮವಾಗಲಿ. ಮತ್ತು ಹೆಚ್ಚಿನ ರೀತಿಯಲ್ಲಿ ಸಮಾಜಕ್ಕೆ ಉತ್ತಮ ಸಂದೇಶ ನೀಡಲಿ ಎಂದರು.
ಈ ಸಂದರ್ಭದಲ್ಲಿ ವಿವಿಧ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಜಾಡೈರಿ ಮಾಸ ಪತ್ರಿಕೆಯ ಸಂಸ್ಥಾಪಕ ಸಂಪಾದಕ ಸುರೇಶ ಮಾತನಾಡಿ, ಪ್ರಜಾಡೈರಿ ಮಾಸ ಪತ್ರಿಕೆ ಈ ಮಟ್ಟಕ್ಕೆ ಬೆಳೆಯಲು ಓದುಗರೆ ಮುಖ್ಯ ಕಾರಣರಾಗಿದ್ದಾರೆ. ನಮ್ಮ ಪತ್ರಿಕೆಯ ಲಾಂಛನವನ್ನು ರಾಜ್ಯಪಾಲರು ಬಿಡುಗಡೆ ಗೊಳಿಸಿರುವುದು ತುಂಬಾ ಹರ್ಷ ಎನಿಸುತ್ತಿದೆ. ಮುಂದಿನ ದಿನಗಳಲ್ಲಿ ನಮ್ಮ ಪತ್ರಿಕೆಯಿಂದ ಸಮಾಜಕ್ಕೆ ಉತ್ತಮ ಕೊಡುಗೆ ನೀಡುವ ಕೆಲಸ ಮಾಡುತ್ತೇನೆ.