
ತಗಡೂರು: ವಿಜಯದಶಮಿ ಹಬ್ಬದ ಅಂಗವಾಗಿ
ಚನ್ನರಾಯಪಟ್ಟಣ ತಾಲೂಕು ತಗಡೂರಿನಲ್ಲಿ ಗಣೇಶೋತ್ಸವ ಮತ್ತು ಸಿದ್ದಲಿಂಗೇಶ್ವರ ಸ್ವಾಮಿ ಉತ್ಸವ ಸಂಭ್ರಮ ಮತ್ತು ಸಡಗರದಿಂದ ನಡೆಯಿತು.
ಬನ್ನಿಮಂಟಪದ ಬಳಿ ಲಿಂಗದವೀರರ ಕುಣಿತ, ತಗಡೂರು ಯುವಕರ ಸುಗ್ಗಿ ಕುಣಿತ, ಹಲಗೆ ಕುಣಿತದ ಬಳಿಕ ಮಹಾಮಂಗಳಾರತಿ, ಅಂಬು ಹಾಯುವ ಕಾರ್ಯಕ್ರಮ ನಡೆಯಿತು.
ಶತಮಾನಗಳಿಂದ ನಡೆದುಕೊಂಡು ಬಂದಿರುವ ತತ್ಸಂಪ್ರದಾಯದಂತೆ ಬಾಳೆ ಕಂದಿಗೆ ಬನ್ನಿಗಿಡದ ಬಳಿಯಿಂದ ಗುಂಡು ಹಾರಿಸುವ ಮೂಲಕ
ವಿಜಯದಶಮಿ ಆಚರಿಸಲಾಯಿತು.
ತಗಡೂರು ಗ್ರಾಮಸ್ಥರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಮತ್ತು ಸುತ್ತಮುತ್ತಲ ಗ್ರಾಮಸ್ಥರು ಹಾಗೂ ಭಕ್ತರು ಉತ್ಸವದಲ್ಲಿ ಭಾಗವಹಿಸಿದ್ದರು.
ಮಹಾಪೂಜೆಯ ಬಳಿಕ ಗಣಪತಿ ವಿಸರ್ಜನೆ ಮಾಡಲಾಯಿತು
