ತಿರುವು
ಯಾವ ತಿರುವಿನೊಳು ಬದುಕು ಸಾಗುತ್ತಿದೆಯೋ ಕಾಣೆ?..
ತಗ್ಗು ದಿಮ್ಮಿಗಳ ನಡುವೆ ಆಯಾಸದ ಭರವಸೆಗಳ ಭ್ರಮೆ ಯೊಳು ಅಥವಾ ರಭಸದ ಗಾಲಿಯಲಿ ತಿರುಗುತ್ತ ತನ್ನದೇ ಆದ ಚಹರೆಯಲಿ ತಿರುವು ತೇಲುತ್ತಿದೆ….
ಬದುಕಿನ ದುಸ್ಸಾರದಿ ಒಂಟಿ
ದೇಹ ಅಳುಕುತ್ತ ಸುತ್ತಲೂ ಹರಡಿರುವ ಗಾಳಿ ಮಾತುಗಳ
ಈಟಿ,,, ಮನವ ತಿವಿದು ಎತ್ತೆತ್ತಲೋ ದೂರ ಹೋಗಿ ನಿಲುವಿಲ್ಲದೆ ಮರದ ನೆರಳಲಿ ಅಳುತ್ತ ಹೊಸ ತಿರುವ ತಿರುಣಿಗೆಯತ್ತ ಕಾದು
ದಣಿವ ಆರಿಸುತ್ತ ಕುಳಿತಿದೆ…
ಗೊತ್ತಿಲ್ಲ ಇಷ್ಟ ಪಡದ ಗಾತ್ರ ಶರೀರದಿ ಕಣ್ಣ ಮಿಟುಕಿಸುತ್ತ
ಅಗೋಚರದ ಮೊರೆಯಲಿ
ರೆಪ್ಪೆ ಗಳೆಲ್ಲ ತೊಯ್ದು ಬಿಸಿಲಜಳಕೆ ಆಹಾರವಾಗಿದೆ…
ತಿರುಗುತ್ತ ತಿರುಗುತ್ತ ತಿರುವು ತಿರುವಿದರೂ ಕಷ್ಟಗಳ ಬುತ್ತಿ
ಹೃದಯರಕ್ತವ ಹೆಪ್ಪುಗಟ್ಟಿ
ಉಸಿರು ಕಟ್ಟುತ್ತಿದೆ..
ಇದಕೆ ಹೊಸ ನೀರ ಅಲೆಯೂ
ಸುಮ್ಮನಾಗಿದೆ…
ಯಾವ ತಿರುವಿಗೆ ಬಂಧನ ಕಳಚುವುದೋ ಅರಿಯೆ?…
ಬೆಂಬಿಡದ ಸಮಾಜದಲ್ಲಿ ಎಲ್ಲವೂ ಹೊಸ ತಿರುವ ತೆಪ್ಪದಲ್ಲಿ ಮುಂದೆ ಈಜಿ
ಸುಧಾರಿಸಿದರೂ ಇರುವ ತಿರುವು ಮಾತ್ರ ಗುಡಾರ
ಚಾಪೆಯಲಿ ಹಗಲು ಗನಸ
ಕನವರಿಕೆ ಯ ತಿರುವುತ್ತಿದೆ…
ಬರೀ ಬ್ರಮರಗಳ ಸಾಲಿ
ಒಂದೊಂದು ಮೈಲಿಯ ಸಾರವನು ತುಂಬುತ್ತಿದೆ…
ಅಕ್ಷರದ ಗೊಟಗುಣಿ ಸ್ವಾರ್ಥ
ತುಂಬಿದ ಹುಣುಸೆಬೀಜ?
ಆದರೂ ಈ ಧರೆ ಕ್ಷಮೆ ಯಾಚಿಸಿ ಸಲಹುತಿದೆ…
ಹಗಲು ಇರುಳು ಹುಣ್ಣಿಮೆ ಅಮಾವಾಸ್ಯ ದ ತಿರುವು
ತೆರವು ಸರಿಸಿದರೂ ಜೈವಿಕ ಅಂಕ ಪರದೆ ಗಾಜಿನ ಮೇಲೆ ನಿಂತ ಮಸಿಯಾಗಿದೆ…

-ಡಾ. ಕೃಷ್ಣವೇಣಿ ಆರ್ ಗೌಡ, ಹೊಸಪೇಟೆ
