ಅನುದಿನ ಕವನ-೧೭೭೮, ಕವಿ: ಸಿದ್ದು ಜನ್ನೂರು, ಚಾಮರಾಜ ನಗರ

ಕವಿದ ಮೋಡ ಕೊಂಚ ಬಾನಲಿ
ಮಳೆಯ ತಂದ ನಿನ್ನ ಗುಂಗಲಿ
ಕಳೆದು ಹೋದೆ ನಿನ್ನಲಿ
ನೀನೆ ಕಾಣಲು ಕಣ್ಣಲಿ
ಕನವರಿಕೆ ನೂರಾರು ಜನ ಜಾತ್ರೆ ನಡುವೆ
ನಾ ದಾರಿ ತಪ್ಪಿ ನಿಂತೆ ನೀ ಎಲ್ಲೆಲ್ಲೂ ಹೀಗೇಕೆ ಕಾಡುವೆ
ಓ ಬಾಲೆ ಕುಸುಮಬಾಲೆ
ಗೀಚುವೆ ದಿನವಿಡಿ ನಿನಗೆಂದೆ ಚಂದದೊಲೆ….ಓ ಬಾಲೆ…

ಸೊಕಿಸಿ ಚಂದದ ಬೆರಳನ್ನು
ಸೋಲಿಸಿ ನನ್ನನ್ನು ಈ ಪರಿ
ಓ ನಾರಿ ಸುಕುಮಾರಿ
ಬದಲಾದೆ ನಾ ನಿನ್ನ ಸೇರಿ
ಹೂವೊಂದು ನೀ ನಗಲು ಹಠಮಾಡಿತು
ನಿನ್ನೆಡೆಗೆ ದೃಷ್ಟಿ ಮಾಡಿ ಮುಡಿ ಸೇರಿತು
ಓ ಬಾಲೆ ಕುಸುಮಬಾಲೆ
ಗೀಚುವೆ ದಿನವಿಡಿ ನಿನಗೆಂದೆ ಚಂದದೊಲೆ ಓ ಬಾಲೆ…

ಹೇಗೆ ನಾ ನಿನಗೆ ಹೇಳಲಿ
ಸೋತ ಈ ಮನದ ಸಂಕಟ
ಓಂ ನಾರಿ ಸುಕುಮಾರಿ
ನಿನ್ನೊಲವೆ ನನಗೆ ಜವಾಬ್ದಾರಿ
ಎದುರಿರಲು ನೀ ಹೀಗೆ ಮಾತೆ ಬಾರದು
ಮೂಕನಂತೆ ಮೌನವಹಿಸಿ ಹಾಗಾಯಿತು
ಓ ಬಾಲೆ ಕುಸುಮಬಾಲೆ
ಗೀಚುವೆ ದಿನವಿಡಿ ನಿನಗೆಂದೆ ಚಂದದೊಲೆ ಓ ಬಾಲೆ…


-ಸಿದ್ದು ಜನ್ನೂರ್, ಚಾಮರಾಜ ನಗರ