ಅನುದಿನ ಕವನ-೧೮೦೩, ಮೂಲ : ಅನಾಮಿಕ ಕವಿಯತ್ರಿ ಕನ್ನಡಕ್ಕೆ : ಸಿದ್ಧರಾಮ ಕೂಡ್ಲಿಗಿ

ನಾನು ಎಲ್ಲವನ್ನೂ
ಹುಡುಕಿಕೊಳ್ಳುವೆ
ಕರವಸ್ತ್ರ, ವಾಚು,
ಪಾದರಕ್ಷೆ, ಪುಸ್ತಕ
ಪಿನ್, ಸೂಜಿ
ಕಳೆದುಹೋದ ಕಿವಿಯ ಓಲೆ……….
ಅಲ್ಲಿ ಇಲ್ಲಿ ಇಟ್ಟ ಕೀ………
ಎಲ್ಲವನ್ನೂ…………

ಮನೆಯಲ್ಲಿ ಯಾರಿಗೂ
ಸಿಗದ ಪ್ರತಿಯೊಂದು ವಸ್ತುವನ್ನೂ
ನಾನು ಹುಡುಕುತ್ತೇನೆ

ಆದರೆ ನನಗೆ ಹುಡುಕಲಾಗುತ್ತಿಲ್ಲ
ನನ್ನನ್ನು………
ಆದರೆ ಒಂದು ದಿನ
ಮನೆಯ ಯಾವುದೋ ಒಂದು ಮೂಲೆಯಲ್ಲಿ
ಭೇಟಿಯಾಗುತ್ತೇನೆ
ಮತ್ತು ನನಗೆ ನಾನೇ ಹೇಳಿಕೊಳ್ಳುತ್ತೇನೆ
ನೋಡಲ್ಲಿ ! ಈಗ ನೀನು ಸಿಕ್ಕೆ
ಮತ್ತೆ ಕಳೆದುಕೊಳ್ಳಬೇಡ

ಮೂಲ : ಅನಾಮಿಕ ಕವಿಯತ್ರಿ


ಕನ್ನಡಕ್ಕೆ : ಸಿದ್ಧರಾಮ ಕೂಡ್ಲಿಗಿ
—–