ಅನುದಿನ ಕವನ-೨೦೨೦, ಕವಿ: ಚಾಮರಾಜ ಸವಡಿ, ಕೊಪ್ಪಳ

ಬದುಕಿಗೆ ಬೇಕು ಭರವಸೆ
ಈ ಪುಟ್ಟ ಹಣತೆಯಂತೆ
ಸುತ್ತಮುತ್ತ ಹರಡಲಿ ಬೆಳಕು
ಕತ್ತಲೆಯ ಓಡಿಸುವಂತೆ

ಸಾಕು ಒಂದು ಪುಟ್ಟ ದೀಪ
ತಿಳಿವಳಿಕೆಗೆ, ನೆಮ್ಮದಿಗೆ
ಅದರಾಚೆಯ ಕಗ್ಗತ್ತಲು
ಯಾವ ಲೆಕ್ಕ ದೀವಿಗೆಗೆ?

ಭರವಸೆ ತರಲಿ ದೀಪಾವಳಿ
ನನಗೆ, ನಿಮಗೆ, ಎಲ್ಲರಿಗೆ
ಹಣತೆಯಾಗಲಿ ಬದುಕು
ನನಗೆ, ನಿಮಗೆ, ಎಲ್ಲರಿಗೆ.

– ಚಾಮರಾಜ ಸವಡಿ ಕೊಪ್ಪಳ

Leave a Reply

Your email address will not be published. Required fields are marked *