
ಬಳ್ಳಾರಿ ನ.25 : ನಗರದ ಶ್ರೀಮತಿ ಗಾಲಿ ರುಕ್ಮಿಣಮ್ಮ ಚೆಂಗಾರೆಡ್ಡಿ ಸ್ಮಾರಕ ಸರ್ಕಾರಿ ವಾಣಿಜ್ಯ ಮತ್ತು ನಿರ್ವಹಣಾ (ಸಿಟಿ) ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಪ್ರೊ. ವೀರಭದ್ರಪ್ಪ ತಂಬ್ರಳ್ಳಿ ಅವರು ಬುಧವಾರ ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಮುನ್ಸಿಪಲ್ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಹಿರಿಯ ಉಪನ್ಯಾಸಕ ತಿಮ್ಮಪ್ಪ, ಪತ್ರಕರ್ತ ತಿಪ್ಪೇಸ್ವಾಮಿ ಹಾಗೂ ಗುತ್ತಿ ಗೋವಿಂದರೆಡ್ಡಿ ಅವರು ಶುಭ ಹಾರೈಸಿದರು.
