ಅನುದಿನ ಕವನ-೨೧೬, ಕವಿ: ಗೀತೇಶ್ (ವಿ.ಆರ್. ಮುರಲೀಧರ್, ಬಳ್ಳಾರಿ) ಕವನದ ಶೀರ್ಷಿಕೆ: ನನ್ನವಳು

 

💃ನನ್ನವಳು💃

ಹುಸಿಮುನಿಸೇ ಇರಲಿ
ಹಸನ್ಮುಖವೇ ಇರಲಿ
ಬಿಡಿಸಲಾರದ ಬಂಧವದು
ಎಂದೆಂದು ನನ್ನವಳು.

ಪ್ರೀತಿಸುವುದಾದರೂ ಸರಿಯೇ
ಜಗಳವಾಡಿದರೂ ಸರಿಯೇ
ಸಂಬಂಧಗಳ ಸೂಕ್ಷ್ಮತೆಯನೆಂದೂ
ಬಿಟ್ಟುಕೊಡದವಳು ನನ್ನವಳು.

ಎಲ್ಲಿಂದಲೋ ಬಂದವಳು
ಬದುಕಿನಲಿ ಒಂದಾದವಳು,
ನಮ್ಮೀರ್ವರಾ ಸಂಬಂಧವನು
ಬೆಸೆದವಳು ನನ್ನವಳು.

ಒಬ್ಬಳೇ ಬಂದವಳಾದರೂ
ನಮ್ಮೀರ್ವರನೊಂದು ಮಾಡಿದಳು
ಬದುಕಿನಾ ಬಂಡಿಯನೆಳೆಯೆ
ಜೋಡೆತ್ತದಾವಳು ನನ್ನವಳು.

ಮುಖಭಾವ ಕಂಡರೆ ಸಾಕು
ಮನಸಿಚ್ಛೆಯನು ಅರಿವವಳು,
ಬೇಕುಬೇಡಗಳನರಿತು ನಿತ್ಯವೂ
ನಡೆಯುವವಳು ನನ್ನವಳು.

-ಗೀತೇಶ್✍️
(ವಿ.ಆರ್. ಮುರಲೀಧರ್, ಬಳ್ಳಾರಿ)👇

Leave a Reply

Your email address will not be published. Required fields are marked *