ಅನುದಿನ ಕವನ-೧೯೯೫, ಹಿರಿಯ ಕವಿ: ಎಂ.ಎಸ್.‌ರುದ್ರೇಶ್ವರಸ್ವಾಮಿ, ಬೆಂಗಳೂರು, ಕವನದ ಶೀರ್ಷಿಕೆ: ಅವಳು ಅವಳ ಹಾಗೆ…

ಅವಳು ಅವಳ ಹಾಗೆ…

ಇತಿಹಾಸ ಮರುಕಳಿಸುತ್ತದೆ
ಮತ್ತೆ ಮತ್ತೆ.
ಪುನರಾವರ್ತನೆ ಕುರೂಪಿ, ಮಾಡಿದ್ದನ್ನೇ
ಮತ್ತೆ ಮತ್ತೆ ಮಾಡುವುದು
ಇನ್ನೂ ಕುರೂಪಿ.

ಮರದಲ್ಲಿವೆ ಸಹಸ್ರಾರು
ಎಲೆ ಎಲೆ
ಒಂದು ಇನ್ನೊಂದರಂತಿಲ್ಲ ಒಂದೊಂದೂ
ಬೇರೆ ಬೇರೆ, ಎಷ್ಟೊಂದು
ಹಸಿರು- ಗಿಣಿ ಹಸಿರು,

ಪಾಚಿ ಹಸಿರು, ಹೀಗೆ.
ಗುಲಾಬಿಯಲ್ಲಿನ
ಒಂದೊಂದು ಹೂ ಬೇರೆ ಬೇರೆ, ಒಂದೇ
ಮರದ ಒಂದೊಂದು ಮಾವಿನ
ಹಣ್ಣಿನ ರುಚಿಯೂ ಬೇರೆ

ಪ್ರಕೃತಿ ಮಹಾಕವಯತ್ರಿ
ಸೃಜನಶೀಲೆ
ಸೃಷ್ಟಿಸುತ್ತಾಳೆ ಸದಾ ಹೊಸತನ್ನು, ಅನನ್ಯ-
ವಾದದ್ದನ್ನು. ಪುನರಾವರ್ತನೆ-
ಯ ಮಾತು ಅವಳಲ್ಲಿಲ್ಲ

ಅವಳ ಹಾಗೆ ಅವಳು
ಮಾತ್ರ…


-ಎಂ ಎಸ್. ರುದ್ರೇಶ್ವರಸ್ವಾಮಿ, ಬೆಂಗಳೂರು

Leave a Reply

Your email address will not be published. Required fields are marked *