ಅನುದಿನ‌ಕವನ-೨೬೧, ಕವಯತ್ರಿ:ಶೋಭ ಶಂಕರಾನಂದ, ಹೊಸಪೇಟೆ, ಕವನದ ಶೀರ್ಷಿಕೆ: ಶಾಶ್ವತ ಅನುಭೂತಿ

 

ಶಾಶ್ವತ ಅನುಭೂತಿ

ಅನುಭಾವದ ಅನಾವರಣ ಸುಂದರವದು
ಗರ್ಭದಿಂದ ಗೋರಿ ತನಕ ಸಂಗಾತಿಯದು
ಮರುಳಾಗದು ನಶ್ವರ ಬಾಹ್ಯ ರೂಪಕೆಂದು
ಆಂತರಿಕ ಸೌಂದರ್ಯ ಪ್ರಜ್ಞೆಯ ಮೂಲವದು

ಸಹಜ ಮಗುವಿನಲ್ಲಿ ಮಮತೆ ತಾಯಿಗೆ
ಅನ್ನ ನೀಡುವ ನೇಗಿಲ ಪೂಜೆ ರೈತನಿಗೆ
ಗುರಿಯಾಗಲು ದೇಶದ ಸೇವೆ ಯೋಧನಿಗೆ
ಹಾಡುವುದೇ ಹಂಬಲವು ಸಂಗೀತಗಾರಗೆ

ಭಕ್ತನ ಪ್ರೇಮವು ದೇವನ ಸಾಕ್ಷಾತ್ಕಾರಕೆ
ಪ್ರಾಣಿ ಸಂಕುಲದ ನಿಜದೊಲವು ಕಾನನಕೆ
ಹರಿವು ಬೆಟ್ಟಗುಡ್ಡಗಳ ನಡುವೆ ನದಿಗಳಿಗೆ
ಪುರುಷನೊಲವು ಕಾರಣ ಪ್ರಕೃತಿ ವಿಸ್ಮಯಕೆ

ವಸುದೈವ ಕುಟುಂಬವು ಜಗದ ಮೂಲವು ಇಹ ಪರದ ಅನುಭೂತಿಗೆ ಶಾಶ್ವತ ಪ್ರೀತಿಯು ತಾನೇ..!?

-ಶೋಭಾ ಶಂಕರಾನಂದ

ಹೊಸಪೇಟೆ (ವಿಜಯನಗರ ಜಿಲ್ಲೆ)

*****

Leave a Reply

Your email address will not be published. Required fields are marked *