ಉತ್ತಮನಾಗು
ಎಲ್ಲರೂ ತಮ್ಮಲ್ಲಿರುವ ಗುಣಗಳನ್ನು
ಕಾಪಿ ಮಾಡಿ ಬದುಕುವವರಿದ್ದಾರೆ
ಇಲಿ ತೋಡಿದ ಬೋನಿನಲ್ಲಿ
ಹೆಗ್ಗಣಗಳು ಬಂದು ಸೇರುವಂತೆ
ಗೆದ್ದಲು ಹುಳು ಕಟ್ಟಿದ ಹುತ್ತದಲ್ಲಿ
ಹಾವುಗಳು ಬಂದು ಸೇರುವಂತೆ
ಉತ್ತಮರ ಮನೆಯೊಳಗೆ
ದುಷ್ಟರು ಬಂದು ಸೇರುವಂತೆ
ಮೋಡ ಮುಸುಕು ಕಟ್ಟಿದರೆ
ಮಳೆ ಹನಿ ಭೂಮಿಗೆ ಬರುವಂತೆ
ಮೆತ್ತನೆ ಮಣ್ಣಿನೊಳಗೆ
ಸೃಷ್ಟಿಯ ಹಸಿರು ಹುಟ್ಟುವಂತೆ
ತೇಲುವ ನೀರಿನ ಅಲೆಗಳು ನಲಿವುದು
ನೀರೊಳಗಿನ ಜೀವಿಗಳ ರಕ್ಷಣೆಗೆ
ಕಡಲ ಆಳದೊಳಗೆ ಸಿಲುಕಿದ
ಮುತ್ತು ರತ್ನಗಳು ಮಿನುಗುವುದಂತೆ
ಎಲ್ಲಕ್ಕೂ ಒಂದೊಂದು ಮಹತ್ವವಿದೆ
ಮಾಡುವ ಕೆಲಸದಲ್ಲಿ ತನ್ನ ಆತ್ಮ ಒಪ್ಪಬೇಕು
ಇನ್ನೊಬ್ಬರಿಗೆ ದ್ರೋಹ ಬಗೆಯುವ ಕೆಲಸ
ಅನ್ಯರಿಗೂ ಮಾಡಬಾರದು ಉತ್ತಮ
-ಜಿ ಟಿ ಆರ್ ದುರ್ಗ, ಜಿ ಹೆಚ್ ಎಲ್, ಬಂಗಾರಪೇಟೆ
*****