ಗುಲ್ ಮೋಹರ್! ಕಿರು ಬರಹ: ಎಂ ಎಂ ಶಿವಪ್ರಕಾಶ್, ಕನ್ನಡ ವಿವಿ, ಹಂಪಿ

ಗುಲ್ ಮೋಹರ್…!

ಗುಲ್ ಮೋಹರ್ ಎಂದರೆ ಮುಂಗಾರಿನ ಮಳೆ ಬೀಳುವ ಮುನ್ನವೆ ಅರಳುವ ಕೆಂದಾವರೆ. ಗುಲ್ ಮೋಹರ್ ಎಂದರೆ ಭೂಮಿಯ ಮೇಲಿನ ಕಾಮನಬಿಲ್ಲು. ಗುಲ್ ಮೋಹರ್ ಎಂದರೆ ಬಳ್ಳಾರಿಯ ಸುಡು ಬಿಸಿಲಿಗೂ ಬಾಡದ ಕೆಂಪು ಸುಂದರಿ. ಗುಲ್ ಮೋಹರ್ ಎಂದರೆ ಪ್ರೇಮಿಗಳ ಪ್ರೀತಿಯನ್ನು ಕೆಂಪಾಗಿಸುವ ಸ್ಪೊರ್ತಿ. ಗುಲ್ ಮೋಹರ್ ಎಂದರೆ ಪ್ರೇಮಿಗಳ ಕನಸಿನ ಮಂದಹಾಸ. ಗುಲ್ ಮೋಹರ್ ಎಂದರೆ ಪ್ರೇಮಿಗಳ ಪಿಸುಮಾತಿನ ಹಂದರ. ಗುಲ್ ಮೋಹರ್ ಎಂದರೆ ಪ್ರೀತಿಯ ಪಕಳೆಗಳನ್ನು ಪ್ರೇಮಿಗಳಿಗೆ ಎರಚುವ ಪ್ರೇಮ ದೇವತೆ. ಗುಲ್ ಮೋಹರ್ ಎಂದರೆ ಹದಿನಾರು ಗಜದ ಸೀರೆಯುಟ್ಟ ನಾರಿ. ಗುಲ್ ಮೋಹರ್ ಎಂದರೆ ಬ್ಯೂಟಿ ಪಾರ್ಲರ್ ಹುಡಿಗಿಯರ ಮುಡಿಯೇರಿ ಬಾಡಲೋಪ್ಪದ ಮೃದಾಂಗಿನಿ. ಗುಲ್ ಮೋಹರ್ ಎಂದರೆ ಪ್ರೀತಿ ಪ್ರೇಮದ ಕೆಂಪು ಸುಂದರಾಂಗಿನಿ.

-ಎಂ ಎಂ ಶಿವಪ್ರಕಾಶ್, ಹಂಪಿ, ಹೊಸಪೇಟೆ ತಾ.

Leave a Reply

Your email address will not be published. Required fields are marked *