“ಇದು ಬದುಕಿನ ತಲ್ಲಣಗಳ ಅನಾವರಣದ ಕವಿತೆ. ಬಾಳ ನಾವೆಯ ಹೊಯ್ದಾಟಗಳ ರಿಂಗಣಗಳ ಭಾವಗೀತೆ. ಇಲ್ಲಿ ಆಳಕ್ಕಿಳಿದಷ್ಟೂ ಅರಿವು ಅರ್ಥಗಳ ವಿಸ್ತಾರವಿದೆ. ಅರ್ಥೈಸಿದಷ್ಟೂ ಜೀವ-ಜೀವನಗಳ ಭಾವಸಂವೇದನೆಗಳ ಹರಿವಿದೆ. ಓದಿ ನೋಡಿ ಖಂಡಿತಾ ಇಷ್ಟವಾಗುತ್ತದೆ. ಏಕೆಂದರೆ ಇದು ನಮ್ಮ ನಿಮ್ಮದೇ ಬದುಕಿನ ನಿತ್ಯ ಸತ್ಯಗಳ…
Category: ಅನುದಿನ ಕವನ
ಅನುದಿನ ಕವನ-೮೬೭, ಕವಿ: ಮಂಜುನಾಥ ಚಾಂದ್, ಬೆಂಗಳೂರು, ಕವನದ ಶೀರ್ಷಿಕೆ:ನಕ್ಷತ್ರಗಳನ್ನು ಹಾಸಿದವಳು…
ನಕ್ಷತ್ರಗಳನ್ನು ಹಾಸಿದವಳು… ಮಿಕ್ಸಿ ಇರಲಿಲ್ಲ, ಹಿಟ್ಟಿನ ಗಿರಣಿಯೂ ಇಲ್ಲ ರಾತ್ರಿ ನೆನೆ ಹಾಕಿದ ಅಕ್ಕಿ ಬೆಳ್ಳಿ ಮೂಡುವ ಹೊತ್ತಿಗೆ ಸೆರಗು ಸೊಂಟಕ್ಕೆ ಸಿಕ್ಕಿ ರೊಟ್ಟಿಯ ಹಿಟ್ಟು ಕಟ್ಟಿದ್ದಾಯಿತು ಕೆಂಡದ ಮೇಲೆ ಸುಡುವ ರೊಟ್ಟಿ ಅಮ್ಮನ ಕಣ್ಣಲ್ಲಿ ನೀರು ಅಡುಗೆಮನೆ ಮೆಟ್ಟಿಲ ಮೇಲೆ…
ಅನುದಿನ ಕವನ-೮೬೬, ಕವಿ:ಲೋಕೇಶ ಮನ್ವಿತಾ, ಬೆಂಗಳೂರು
ಕಾಡಿ ಆಡಿಕೊಳ್ಳುವ ನೋವುಗಳ ಮೇಲೆಷ್ಟು ಪ್ರೀತಿ ವ್ಯಾಮೋಹ ತಿವಿದು ಹಾಕುವ ನಿದ್ದೆ ಕೆಡಿಸುವ ಇಲ್ಲದ್ದಲ್ಲದ ಕೀಟಲೇ ಮಾಡುವ ಹೊರಳಾಡಿ ಮಗ್ಗಲು ಬದಲಾಯಿಸಿ ಎದ್ದು ಹೊರಡಲೊರಟರು ಬೆರಳು ಹಿಡಿಯುವ ವಾಸ್ತವವಾಗಿ ಕುಳಿತು ಮನಸ್ಸು ಭಿತ್ತರಿಸುವ ಇರಾದೆ ಕಸಿದು ಅನ್ಯಮನಸ್ಕನನ್ನಾಗಿಸುವ ಎಲ್ಲೂ ಇರದಂತೆ ಇರುವೆ…
ಅನುದಿನ ಕವನ-೮೬೫, ಕವಿ: ಪ್ರೊ. ಎಂ. ನಾರಾಯಣ ಸ್ವಾಮಿ ತ್ಯಾವನಹಳ್ಳಿ, ಬೆಂಗಳೂರು, ಕವನದ ಶೀರ್ಷಿಕೆ: ಹಸಿರು ಕ್ರಾಂತಿಯ ದೀವಟಿಗೆ
ಹಸಿರು ಕ್ರಾಂತಿಯ ದೀವಟಿಗೆ ಡಾ.ರಾಗಿ ಲಕ್ಷ್ಮಣಯ್ಯ ಮೇ 15, 2023 ರಾಗಿ ಲಕ್ಷ್ಮಣಯ್ಯನವರ 102 ನೇ ಜನ್ಮದಿನ. ರಾಗಿ ತಳಿಗಳ ಸಂಶೋಧಕರಾಗಿ, ರಾಗಿಬ್ರಹ್ಮನಾಗಿ, 1951ರಿಂದ 1984 ರವರೆಗೆ ಅನ್ನಪೂರ್ಣ, ಉದಯ, ಪೂರ್ಣ, ಅರುಣ, ಶಕ್ತಿ, ಸಂಪೂರ್ಣ, ಕಾವೇರಿ, ಇಂಡಾಫ್ 1 ರಿಂದ…
ಅನುದಿನ ಕವನ-೮೬೪, ಕವಿಯಿತ್ರಿ: ಆಶಾದೀಪ, ಬೆಂಗಳೂರು, ಕವನದ ಶೀರ್ಷಿಕೆ:ಮರುಭೂಮಿ ನನ್ನಮ್ಮ
ಮರುಭೂಮಿ ನನ್ನಮ್ಮ ಫಲವತ್ತಾದ ಮಣ್ಣಾ..ಅಲ್ಲಾ ನನ್ನಮ್ಮ , ಮರಳುಗಾಡಿನ ಮರುಭೂಮಿ .. ಬಿರಿವ ಬಿಸಿ ಬಿರುಗಾಳಿ ಬಿರುಸಿಗೆ ಆಕಾರ ಪಡೆದು ನಡೆದವಳು… ಕತ್ತಲ ಚಳಿಯಲಿ ಹನಿದಿಬ್ಬನಿಯನೇ ಕುಡಿದದನಾರದಂತೆ ಒಡಲೊಳಗೆ ಊಟೆಕಟ್ಟಿಟ್ಟುಕೊಂಡವಳು.. ಹಿತಶತ್ರು ರವಿಯ ಬಿಸಿಲಿಗೆ ಅವಳಾ ಮುಖವೂ ಹೊಳೆದರೆ, ಉರಿಗೆ ಸುಡುತ್ತಿತ್ತು…
ಅನುದಿನ ಕವನ-೮೬೩, ಯುವ ಕವಿ:ಲೈನ್ಮನ್ ರಾಮಣ್ಣ, ಕೊಟ್ಟೂರು
ಬೆಳದಿಂಗಳು ಸುಡೋವಂಗಾ ನೋಡಬ್ಯಾಡವೇ ಹುಚ್ಚೀ; ದಯಿ ಇರ್ಲಿ ಒಂದಷ್ಟು… ನಕ್ಷತ್ರಗಳು ನೆಟೆ ಬೀಳುವಂಗಾ ನಗಬ್ಯಾಡವೇ ಹುಚ್ಚೀ; ದಯಿ ಇರ್ಲಿ ಒಂದಷ್ಟು… ತಂಗಾಳಿ ತಿಣುಕವಂಗಾ ಬಳುಕಬ್ಯಾಡವೇ ಹುಚ್ಚೀ; ದಯಿ ಇರ್ಲಿ ಒಂದಷ್ಟು… ಹೂಗಳು ಅಮಲೇರುವಂಗಾ ಉಸುರಾಡಬ್ಯಾಡವೇ ಹುಚ್ಚೀ; ದಯಿ ಇರ್ಲಿ ಒಂದಷ್ಟು… ನಾನೇ…
ಅನುದಿನ ಕವನ-೮೬೨, ಕವಿಯಿತ್ರಿ: ಡಾ. ಸುಜಾತಾ ಸಿ, ವಿಜಯಪುರ
ಬುದ್ದ ಇದ್ದನಲ್ಲಿ ಶಾಂತ ಚಿತ್ತನಾಗಿ ಕುಳಿತೆ ಇದ್ದ ಊರ ಸಂತೆಯ ಮಧ್ಯೆ ಗೊಜು ಕಿರುಚಲುಗಳ ಸದ್ದಿನಲ್ಲಿ ಒಂದು ಮಾತನಾಡದೇ ಮೌನದ ಆಭರಣ ತೊಟ್ಟು ಅವನನ್ನು ನೋಡಿ ಮುಂದಿನ ಪಯಣ ಬೆಳೆಸಿದ್ದೊ ಬೆಳೆಸಿದ್ದೊ ಬುದ್ದ ನಗುತ್ತಲೇ ಇದ್ದ ಗಾಢ ಅಂದಕಾರವ ಕವಿದ ಕಾರ್ಮೊಡವ…
ಅನುದಿನ ಕವನ-೮೬೧, ಕವಿಯಿತ್ರಿ: ಕೆ ಪಿ ಮಹಾದೇವಿ, ಅರಸೀಕೆರೆ
ಇಲ್ಲಿ ಕಾಲಕಾಲಕ್ಕೆ ತಕ್ಕಂತೆ ದಾರಿಗರಿಗೆ ಅಲ್ಲಲ್ಲೇ ದಿಕ್ಸೂಚಿ ಕೈಮರಗಳಿಗೂ ಸೂಚನೆ ಎಚ್ಚರಿಕೆಗಳಿಗೂ ನಿಲ್ದಾಣ ತಂಗುದಾಣಗಳಿಗೂ ಹಳ್ಳ ದಾಟಿಸುವ ಹಮ್ಮೀರರಿಗೂ ಎಂದಿಗೂ ಕೊರತೆಯಿಲ್ಲ… ಆದರೂ… ಗುರಿ ಮತ್ತು ಮಾರ್ಗಗಳ ಆಯ್ಕೆ ಯಾವತ್ತೂ ನಡೆಯುವವರಿಗೇ ಬಿಟ್ಟದ್ದು…. ಮಾರ್ಗಕ್ಕೆ ಮತಿಯಿಟ್ಟು ಗಿರಿ ಪರ್ವತಗಳ ಹತ್ತಿ ಆಳ…
ಅನುದಿನ ಕವನ-೮೬೦, ಕವಿಯಿತ್ರಿ: ಡಾ. ನಾಗರತ್ನ ಅಶೋಕ ಬಾವಿಕಟ್ಟಿ, ಹುನಗುಂದ, ಕಾವ್ಯ ಪ್ರಕಾರ: ಗಜಲ್
ಗಜ಼ಲ್ ಕಾಮಿತ ಫಲವ ಕಾಪಿಟ್ಟು ಪಡೆದಿಹೆನು ಮರೆಯದ ಒಲುಮೆ ನೀಡುವೆಯಾ ಗಂಧರ್ವ ಲೋಕದ ದೇವ ಕನ್ಯೆಗೆ ಪ್ರೇಮದ ಚಿಲುಮೆ ಚಿಮ್ಮುವೆಯಾ ಮುತ್ತಿನ ಮಾತಿನಲಿ ಹತ್ತಿರ ಸುಳಿಯುತಲಿ ಸಕ್ಕರೆಯ ಸವಿಯ ತಿನಿಸಿದೆಯಲ್ಲ ಕುಶಲವ ಕೇಳುತಲಿ ಹೆಸರ ಹೇಳೆಂದು ಸರಸದಿ ಜುಲುಮೆ ಮಾಡುವೆಯಾ ಲಜ್ಜೆಯ…
ಅನುದಿನ ಕವನ-೮೫೯, ಕವಿ: ಡಾ.ವಡ್ಡಗೆರೆ ನಾಗರಾಜಯ್ಯ, ಬೆಂಗಳೂರು, ಕವನದ ಶೀರ್ಷಿಕೆ:ಮಳೆ ಬಿದ್ದ ನೆಲದ ಆರಂಭ
ಮಳೆ ಬಿದ್ದ ನೆಲದ ಆರಂಭ ಮುಂಗಾರು ಭರಣಿ ಮಳೆ ಹೆಜ್ಜೆಯೂರಿ ಧರಣಿ ಮೈಮೇಲೆ ನೇಗಿಲ ಕುಳದ ಕಚಗುಳಿ ! ಹೆಗಲುಗೊಟ್ಟು ಆರು ಎಳಿಯೋ ಆರಂಬದೆತ್ತುಗಳು ಕೊಟ್ಟಿಗೆ ರಂಜಣಿಗೆ ಕಣ್ಗೂಟ ಕಣ್ಣಿ ಕಳೆದುಕೊಂಡಿವೆ ಟಿಲ್ಲರ್ ಟ್ರಾಕ್ಟರ್ ಎದುರು ! ಬೀಜ ಬಿತ್ತಲು ಬೆವಸಾಯದ…
