ಕವಿಯಿತ್ರಿ ಪರಿಚಯ: ಕೊಡಗಿನ ಮಡಿಕೇರಿ ತಾಲ್ಲೂಕಿನ ಮೂರ್ನಾಡು ಪುಟ್ಟ ಗ್ರಾಮದ ರಮ್ಯ ಕೆಜಿ ಅವರು ವೃತ್ತಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕಿ. ಓದು, ಬರೆಹ ಇವರ ನೆಚ್ಚಿನ ಹವ್ಯಾಸ. “ದಾಹಗಳ ಮೈ ಸವರುತ್ತಾ” ಇವರ ಪ್ರಕಟಿತ ಕವನ ಸಂಕಲನ. …
Category: ಅನುದಿನ ಕವನ
ಅನುದಿನ ಕವನ-೮೭೬, ಕವಿಯಿತ್ರಿ: ರಂಹೊ, ತುಮಕೂರು, ಕವನದ ಶೀರ್ಷಿಕೆ: ಬುದ್ಧ
ಬುದ್ಧ ಬುದ್ಧ ಚಿತ್ರಗಳಲಿಲ್ಲ ನೋಟದಲ್ಲಿದ್ದಾನೆ! ಬುದ್ಧ ಗೋಡೆಯ ಮೇಲೆ ತೂಗುವುದಿಲ್ಲ ಎದೆಯೊಳಗೆ ಜೀಕುತ್ತಾನೆ! ಬುದ್ಧ ಮಾತುಗಳ ಮೆರವಣಿಗೆಯಲ್ಲಿಲ್ಲ ಮೌನದಲ್ಲಿದ್ದಾನೆ! ಬುದ್ಧ ಕಿತ್ತುಕೊಳ್ಳುವುದರಲ್ಲಿಲ್ಲ ಕೊಟ್ಟು ಸುಖಿಸುವುದರಲ್ಲಿದ್ದಾನೆ! ಬುದ್ಧನೆಂದರೆ ಮತ್ತೇನು ತಾಯಿಯೂ…. ಮಗುವೂ……!! -ರಂಹೊ(ರಂಗಮ್ಮ ಹೊದೇಕಲ್), ತುಮಕೂರು
ಅನುದಿನ ಕವನ-೮೭೫, ಕವಿ: ನಾಗತಿಹಳ್ಳಿ ರಮೇಶ, ಬೆಂಗಳೂರು, ಕವನದ ಶೀರ್ಷಿಕೆ: ಅವ್ವನ ನೆನಪು
ಅವ್ವನ ನೆನಪು ಅವ್ವ ನಿನ್ನ ನೆನಪು ನಾಲಗೆಯಲಿ ಉಕ್ಕುವ ತಿಳಿ ಕಡಲು ಈಸುತ್ತಿರುವ ಜಲಚರವಾಗಿ ಚಿಪ್ಪೊಳು ಮುತ್ತಾಯ್ತು. ನಿನ್ನ ಮೇಲೆ ಬರೆ ಎಳೆದ ಅಡ್ಡ ಗೆರೆಯ ಸಾಲು; ಆಕಾಶಕ್ಕೇ ಬರೆ ಇಟ್ಟಂತೆ ಸುಳಿ ಮಿಂಚು ಕಣ್ಣಿನಾಳದಿಂದ ಉಕ್ಕುಕ್ಕಿ ಬಂದೇ ಬರುವುದು ಮಳೆ.…
ಅನುದಿನ ಕವನ-೮೭೪, ಕವಿ: ಡಾ. ದಸ್ತಗೀರಸಾಬ್ ದಿನ್ನಿ, ಬಳ್ಳಾರಿ, ಕಾವ್ಯ ಪ್ರಕಾರ: ಗಜಲ್
ಗಜಲ್ ನಿನ್ನ ಬಿಸಿಉಸಿರ ಪತ್ರದ ಸಾಲುಗಳಲಿ ಒಲವಿನ ಪರಿಮಳವಿದೆ ಮುಸುಕಿದ ನಿಟ್ಟುಸಿರು ಸುಪ್ತ ಬಯಕೆಯಲಿ ಕಪಟವರಿಯದ ಹೃದಯವಿದೆ . ಮಾಟ ಹೂಡುವ ಕಂಗಳ ಲೋಕದಲಿ ಉರಿವ ದೀಪವಿದೆ ಪ್ರೀತಿ ಬೆಸುಗೆ ಉಕ್ಕಿಸುವ ತುಟಿಗಳಲಿ ಜೇನ ಸ್ವಾದವಿದೆ . ಮೆತ್ತಿದ ಬಣ್ಣ ಬಿಡಿಸಿದ…
ಅನುದಿನ ಕವನ-೮೭೩, ಕವಿ: ಮಹಿಮ, ಹಂದ್ಯಾಳ್ ಕವನದ ಶೀರ್ಷಿಕೆ: ಕನಸುಗಳು
ಯಾರೋ ಬೀಳಿಸುವ ಕನಸುಗಳು ಬಹು ಸುಂದರ ಮನೋಹರ ಅಂತಹ ಕನಸುಗಳನೆಂದೂ ನೆಚ್ಚಬೇಡ ನೆಚ್ಚಿ ಕೂರಬೇಡ ಹುಚ್ಚು ಹಿಡಿಸಲು ನಿನಗೆ ಬೀಳಿಸುವರು ಕನಸುಗಳ ದಾರಿ ತಪ್ಪಿಸುವರು ಇನ್ನೊಬ್ಬರು ಬೀಳಿಸುವ ಕನಸುಗಳು ನಿನಗೆ ಬೀಳುವ ಕನಸುಗಳಿಗಿಂತ ಬಹು ಸುಂದರ ಬೇಡವೇ ಬೇಡ ನಂಬ ಬೇಡ…
ಅನುದಿನ ಕವನ-೮೭೨, ಕವಿ: ಡಾ.ವೆಂಕಟೇಶ ನೆಲ್ಲುಕುಂಟೆ, ಬೆಂಗಳೂರು, ಕವನದ ಶೀರ್ಷಿಕೆ:ಪದ್ಯ ಬರೆಯುವುದು ಎಷ್ಟು ಕಷ್ಟ
ಪದ್ಯ ಬರೆಯುವುದು ಎಷ್ಟು ಕಷ್ಟ ಕುಡಿದು ಕಕ್ಕಿದ ಗಂಡನ ಕೋಣೆ ಸೊಳ್ಳೆ ಕಾರಖಾನೆ ಸತ್ತು ಸುಮ್ಮನೆ ನಿಂತ ಗಾಳಿ ಬೇನೆ ಅಪ್ಪಿಕೊಂಡರೆ ರೋಮ ಸೂಜಿ ಮೊನೆ ಉರಿ ಬೇಸಿಗೆ ಯಮ ಯಾತನೆ ದೂರದಲ್ಲೆಲ್ಲೊ ಜೋಗಿ ಹಾಡುತ್ತಾನೆ ಹಳ್ಳ ಹರಿಯುತ್ತಿದೆ ಹೊಂಗೆ ಹೂ…
ಅನುದಿನ ಕವನ-೮೭೧, ಕವಿಯಿತ್ರಿ: ಡಾ. ನಂದಿನಿ ವಿರು, ಬೆಂಗಳೂರು, ಕವನದ ಶೀರ್ಷಿಕೆ: ಮರೆತೆಯಾ ಒಲವೇ…
🌹ಮರೆತೆಯಾ ಒಲವೇ🌹 ಮರೆತೆಯಾ ಒಲವೇ ಹಿಡಿದ ಹಸ್ತವನು ಚಿಗುರ ಬೆರಳನು ಬೆರಳ ಉಂಗುರವನು ಕೊಟ್ಟ ಮಾತನ್ನೂ ಮರೆತೆಯಾ ಮೇಘವು ಸಂದೇಶ ಹೊತ್ತು ತರುವುದೆಂದು ಆಗಸಕ್ಕೆ ಮುಖವಿರಿಸಿದರೆ ಕಂಗಳ ಹನಿಗಳೊಂದಿಗೆ ಕಾರ್ಮುಗಿಲು ಜೊತೆಗೂಡಿದೆ ಸಣ್ಣದೊಂದು ಸದ್ದಿಗೂ ನಿನ್ನ ಬರುವಿಕೆಯೆಂಬ ಚಡಪಡಿಕೆ ಜಗದ ನೋಟವೆಲ್ಲ…
ಅನುದಿನ ಕವನ-೮೭೦, ಕವಿ: ವಿಠೋಬಾ ಹೊನಕಾಂಡೆ, ಬೆಳಗಾವಿ, ಕವನದ ಶೀರ್ಷಿಕೆ: ಅನ್ನ ರಾಮಯ್ಯ
ಅನ್ನ ರಾಮಯ್ಯ ಸಿದ್ದರಾಮನ ಹುಂಡಿಯಲಿ ಹುಟ್ಟಿ ಬೆಳೆದು ಜನಪರ ಹೋರಾಟಕೆ ಹೆಗಲು ಕೊಟ್ಟು ದೌರ್ಜನ್ಯಗಳ ಎದುರು ಮೆಟ್ಟಿ ನಿಂತು ನೊಂದವರಿಗೆ ದನಿಯಾದ ಗಟ್ಟಿರಾಮಯ್ಯ ಇವರು ನಮ್ಮರಾಮಯ್ಯ ll ಹಸಿದವರಿಗೆ ಅನ್ನಭಾಗ್ಯ ಮಕ್ಕಳಿಗೆ ಕ್ಷೀರ ಭಾಗ್ಯ ಓದುವವರಿಗೆ ವಿದ್ಯಾಸಿರಿ ರೈತರಿಗೆ ಕೃಷಿ -ಪಶುಭಾಗ್ಯ…
ಅನುದಿನ ಕವನ-೮೬೯, ಕವಿ: ಮಹೇಂದ್ರ ಕುರ್ಡಿ, ಹಟ್ಟಿ ಚಿನ್ನದ ಗಣಿ(ರಾಯಚೂರು ಜಿಲ್ಲೆ), ಕವನದ ಶೀರ್ಷಿಕೆ: ಊಟ
ಊಟ ಊಟವಿಲ್ಲದೆ ನಡೆಯದು ಜೀವದ ಆಟ ಅನ್ನಕ್ಕಾಗಿ ಮನುಜನದು ನಿತ್ಯದ ಹೋರಾಟ. ಮೃಷ್ಟಾನ್ನ ಭೋಜನ ಕೆಲವರಿಗೆ ಉಂಟು ತುತ್ತು ಸಿಗದೇ ದಿನ ದೂಡುವವರುಂಟು. ಬಲು ಇಷ್ಟ ತಿನ್ನಲು ಸಂಪಾದನೆಯದು ಕಷ್ಟ ದುಡಿಮೆಯ ಫಲ ತಿನ್ನಲು ದೇಹಕೆ ಸೇರುವುದು ಸ್ಪಷ್ಟ . ಹಳಸಲು…
ಅನುದಿನ ಕವನ-೮೬೮, ಕವಿ: ಎ.ಎನ್.ರಮೇಶ್. ಗುಬ್ಬಿ, ಕಾರವಾರ, ಕವನದ ಶೀರ್ಷಿಕೆ:ವಿಭ್ರಾಂತ ನಾವಿಕರು.!
“ಇದು ಬದುಕಿನ ತಲ್ಲಣಗಳ ಅನಾವರಣದ ಕವಿತೆ. ಬಾಳ ನಾವೆಯ ಹೊಯ್ದಾಟಗಳ ರಿಂಗಣಗಳ ಭಾವಗೀತೆ. ಇಲ್ಲಿ ಆಳಕ್ಕಿಳಿದಷ್ಟೂ ಅರಿವು ಅರ್ಥಗಳ ವಿಸ್ತಾರವಿದೆ. ಅರ್ಥೈಸಿದಷ್ಟೂ ಜೀವ-ಜೀವನಗಳ ಭಾವಸಂವೇದನೆಗಳ ಹರಿವಿದೆ. ಓದಿ ನೋಡಿ ಖಂಡಿತಾ ಇಷ್ಟವಾಗುತ್ತದೆ. ಏಕೆಂದರೆ ಇದು ನಮ್ಮ ನಿಮ್ಮದೇ ಬದುಕಿನ ನಿತ್ಯ ಸತ್ಯಗಳ…
