ಇನ್ನೇನು ಇತ್ತು ಹೇಳು ನಮ್ಮಿಬ್ಬರ ಮಧ್ಯೆ….? ಯಾರಿಗೆ ಗೊತ್ತು ನಾವಿಬ್ಬರು ಇಂದು ಭೇಟಿಯಾದರೂ ಆಗಬಹುದು ಈ ಹಾಳು ಮಧ್ಯಾಹ್ನಗಳೆಲ್ಲ ಕರಗಿ ಹತ್ತಿಯಷ್ಟು ಹಗುರಾಗಿ ಬೂರುಗದ ಹೂಗಳಂತೆ ನಮ್ಮಿಬ್ಬರ ಮಧ್ಯೆ ಹಾರಾಡಬಹುದು ಇಪ್ಪತ್ತು ವರ್ಷ- ನಾ ನಿನ್ನ ನೋಡದೇ.. ಗಂವ್ ಎನ್ನುವ…
Category: ರಾಜ್ಯ
ಅನುದಿನಕವನ-೩೨೮, ಕವಿ:ಸಿದ್ಧರಾಮ ಕೂಡ್ಲಿಗಿ, ಕಾವ್ಯ ಪ್ರಕಾರ:ಗಜಲ್
ಗಜಲ್ ಅರ್ಥವೇ ಇರದ ದಾರಿಯಲಿ ನಡೆಯುವುದು ಬೇಡಬಿಡು ಕಣ್ಣೇ ಇರದಿರುವಲಿ ಕನಸುಗಳ ಕಾಣುವುದು ಬೇಡಬಿಡು – ನೆಲದ ರೋದನ ಒಣಮರದ ಟೊಂಗೆಗಳಾಗಿ ಕೈಚಾಚಿವೆ ಹಸಿದನಿಯೇ ಇರದ ಮರಳಿನಲಿ ಚಿಗುರುವುದು ಬೇಡಬಿಡು – ಬರೀ ಧೂಳಿಡಿದ ಬದುಕಿನಲಿ ಸಂಜೆಯೂ ಮಂಕಾಗಿಹುದು ವಾಸವಿರದ ಮನೆಯಲಿ…
ಅನುದಿನ ಕವನ-೩೨೭, ಕವಿ: ದೇವರಾಜ್ ಹುಣಸಿಕಟ್ಟಿ, ರಾಣೇಬೆನ್ನೂರು, ಕಾವ್ಯ ಪ್ರಕಾರ:ಗಜಲ್
ಗಜಲ್ ಬೆತ್ತಲಾಗಲು ಕತ್ತಲೆಯಾಗಬೇಕೆಂದಿಲ್ಲ ತುಸು ಚಿತ್ತ ಚಾಂಚಲ್ಯವಿದ್ದರೆ ಸಾಕು ಮೆತ್ತಗಾಗಲೂ ಅಧಿಕಾರ ಕಳೆದುಕೊಳ್ಳ ಬೇಕೆಂದಿಲ್ಲ ತುಸು ದೌರ್ಬಲ್ಯ ವಿದ್ದರೆ ಸಾಕು ಸುತ್ತಲೂ ನಿನ್ನವರೆಂದು ಹೇಳುವ ವೇಷಧಾರಿಗಳು ಸಾವಿರ ಜನರಿರುವರು ಇರಿಯಲೆಂದೆ ಕಾದು ಕುಳಿತಿರುವರು ತುಸು ನಿನ್ನಿಂದ ಲಾಭವಿಲ್ಲದಿದ್ದರೆ ಸಾಕು ಸೈತಾನನ ಸಂತಾನರು…
ಅನುದಿನ ಕವನ-೩೨೬, ಕವಿ: ಟಿ.ಪಿ. ಉಮೇಶ್, ಹೊಳಲ್ಕೆರೆ, ಕವನದ ಶೀರ್ಷಿಕೆ: ನೀನು ಮತ್ತು ಹೂ
ನೀನು ಮತ್ತು ಹೂ ನಾ ಹೂವ ಇಷ್ಟಪಟ್ಟೆ; ನೀ ಪರಿಮಳ ಹುಡುಕಿ ಹೊರಟೆ! ನನಗೆ ಹೂವು ಸಿಕ್ಕಿತು; ನೀನು ಸಿಗಲಿಲ್ಲ! * ಹೂವಾದರು ನೀನು; ಸುಗಂಧವಾಗಲಿಲ್ಲ! ಆಘ್ರಾಣಿಸಲು ನಾನೆಂದು ಆಸೆ ಪಡಲಿಲ್ಲ ಎಲ್ಲ ಹೂಗಳಿಗೂ; ಸುಗಂಧವಿರಬೇಕಿಲ್ಲ! * ಪ್ರೀತಿ ನಿನ್ನಲ್ಲಿತ್ತು; ಹೂ…
ಅನುದಿನ ಕವನ-೩೨೫, ಕವಿ:ಚಂದ್ರಕಾಂತ ವಡ್ಡು, ಬೆಂಗಳೂರು, ಕವನದ ಶೀರ್ಷಿಕೆ: ರೈತನ ಸಾಲ ನುಂಗಿತ್ತಾ
ರೈತನ ಸಾಲ ನುಂಗಿತ್ತಾ ರೈತನ ಸಾಲ ನುಂಗಿತ್ತಾ ರೈತನ ಸಾಲ ನುಂಗಿತ್ತಾ, ನೋಡವ್ವ ತಂಗಿ ರೈತನ ಸಾಲ ನುಂಗಿತ್ತಾ ಹೊಳೆಯು ಹೊಲವ ನುಂಗಿ ಮಳೆಯು ಬೆಳೆಯ ನುಂಗಿ ಮಣ್ಣು ತೆನೆಯ ನುಂಗಿ, ಕಣವು ಕಾಳನು ನುಂಗಿತ್ತಾ ತಂಗಿ ರೈತನ ಸಾಲ ನುಂಗಿತ್ತಾ…
ಅನುದಿನ ಕವನ-೩೨೪, ಕವಯತ್ರಿ: ಅಂಕಲಿ ಬಸಮ್ಮ ವಡ್ಡು, ಕವನದ ಶೀರ್ಷಿಕೆ: ಕನಕ
ಕನಕ ಬವಬಂಧನವ ತೊರೆದು ನೀ ತೋರಿದ ದಾರಿಯಲಿ ನನ್ನನ್ನು ನಡೆಸು ಕನಕ. ಮದಮತ್ಸರವ ಕುದಿಸಿ ನೀ ಭಕ್ತಿಯ ಪಾಯಸವ ಉಣಿಸು ಕನಕ. ಕುಲದ ಹಂಗಿನ ಹಗ್ಗವನು ಭಕ್ತಿಯ ರಾಟಿಯಲಿ ನೇಯ್ದವರು ನೀವು. ಕುಲ ಕುಲವೆಂದು ಹೊಡೆದಾಡುವವರಿಗೆ ಕುಲದ ಮೂಲವನು ಮತ್ತೆ ತೋರಿಸು…
ಅನುದಿನ ಕವಿತೆ-೩೨೩ ಕವಿ: ಎ.ಎನ್ ರಮೇಶ್, ಗುಬ್ಬಿ, ಕವನದ ಶೀರ್ಷಿಕೆ: ಮಳೆ-ಮಳೆ ನಾಲ್ಕು ಹನಿಗಳು..
ಮಳೆ-ಮಳೆ ನಾಲ್ಕು ಹನಿಗಳು.. 1 ಪರಿಣಾಮ..! ಮೇಘಗಳ ಮುಗಿಯದ ಪ್ರಣಯ ಇಳೆಯಲಿ ಅಕ್ಷರಶಃ ಜಲಪ್ರಳಯ.! 2 ಆಕ್ರಮಣ..! ವರುಣ ಬಾನಗಲ ಬುವಿಯಗಲ ಹಬ್ಬಿದ್ದಾನೆ ಧರಣಿಯನು ತಬ್ಬಿದ್ದಾನೆ ಅಂಬರದಿಂದ ಅರುಣನನ್ನೇ ಹೊರ ದಬ್ಬಿದ್ದಾನೆ.! 3 ಕೋಡಿ..! ಅಕಾಲಿಕ ಮಳೆಯಿಂದ ಕೆರೆ ಕಟ್ಟೆಗಳಲಷ್ಟೇ ಅಲ್ಲ..…
ಅನುದಿನ ಕವನ:೩೨೨, ಕವಯತ್ರಿ:ಡಾ.ಕೆ.ಎನ್ ಲಾವಣ್ಯ ಪ್ರಭ, ಮೈಸೂರು, ಕವನದ ಶೀರ್ಷಿಕೆ: ಬೆಳದಿಂಗಳಾದವಳು….
ಬೆಳದಿಂಗಳಾದವಳು…. ಮೋಡ ಕರಗಿ ಎಡಬಿಡದೆ ಸುರಿವ ಮಳೆ ಮೈಕೊರೆವ ತಣ್ಣನೆಯ ಚಳಿಯ ಕಾರ್ತೀಕದ ಹುಣ್ಣಿಮೆಯ ಕಾರ್ಗತ್ತಲಲ್ಲೂ ಅವನ ನೆನಪಿನಪ್ಪುಗೆಯಲ್ಲಿ ಒರಗಿ ಕರಗಿ ಬೆಚ್ಚಗಾದವಳು…. ಬೀಸುವ ಥಂಡಿಗಾಳಿಗೆ ಹೊಸ್ತಿಲದೀಪ ಆರದಂತೆ ಅಂಗೈಲಿಡಿದು ಕಾಯುತ್ತಾ ಕತ್ತಲಲ್ಲೂ ಕಣ್ಣನೆಟ್ಟು , ಎದೆಯೊಳಗೆ ಬಣ್ಣಬಣ್ಣದ ಕಿಡಿಯ ಮತಾಪು…
ಅನುದಿನ ಕವನ-೩೨೧, ಕವಿ: ಡಾ. ಅಶೋಕ ಕುಮಾರ ಎಸ್ ಮಟ್ಟಿ ಮೀನಕೇರಿ, ಯಾದಗಿರಿ ಕವನದ ಶೀರ್ಷಿಕೆ: ಅರಿವಿನ ದೀಪ ಹಚ್ಚು
ಅರಿವಿನ ದೀಪ ಹಚ್ಚು ಅರಿವಿನ ದೀಪ ಹಚ್ಚಬೇಕು ಮರುಳ ಬದುಕಾಗುವುದು ಬೆಣ್ಣೆ ತಿಂದಷ್ಟು ಸರಳ ಬದುಕಿಗೆ ಕಷ್ಟಗಳು ಬರುವವು ಬಲು ವಿರಳ. ತೋರಬೇಡ ಒಂದು ಬೆರಳ ಕತ್ತರಿಸಬೇಡ ಸಂಬಂಧದ ಕರುಳ ನಮ್ಮ ಬೆನ್ನೇ ಕಾಣುವುದಿಲ್ಲ ಮರುಳ. ಕೊರಗಬೇಡ ಚಿಂತೆಯಲ್ಲಿ ನರಳಿ ಹೋದ…
ಅನುದಿನ ಕವನ-೩೨೦, ಕವಿ:ನಾಗೇಶ ನಾಯಕ, ಸವದತ್ತಿ, ಕಾವ್ಯ ಪ್ರಕಾರ: ಗಜಲ್
ಗಜ಼ಲ್ ••••••• ಹಾವಿಗೆ ಹಾಲೆರೆದೆ ವಿಷ ಕಕ್ಕಿತು ಗುಳ್ಳೆನರಿಯ ಸಂಗ ಮಾಡಿದೆ ಬೆನ್ನಿಗಿರಿಯಿತು ಎಷ್ಟು ಪ್ರೀತಿ ಕೊಟ್ಟರೂ ದ್ವೇಷ ಹಂಚುವರಿಲ್ಲಿ ನೋವುಗಳನ್ನು ನೇವರಿಸಿದೆ ಮುಳ್ಳು ತಾಕಿತು ಭರವಸೆಗಳನ್ನೇ ಮುರಿದು ಕೇಕೆ ಹಾಕುವರಿಲ್ಲಿ ಹೆಗಲಿಗೆ ಹೆಗಲು ನೀಡಿದೆ ವಿಷಾದ ಎದೆಗಿಳಿಯಿತು ಕಣ್ಣಂಚಿನ ಹನಿಗಳು…
